ಮಂಡ್ಯ: ತಾಲೂಕಿನ ಕೆರಗೊಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ವಿರುದ್ಧ ಕೆರಗೋಡು ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನವರಿ 28 ರಂದು ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
ಹನುಮ ಧ್ವಜ ತೆರವು ವಿರೋಧಿಸಿ ನೂರಾರು ಮಂದಿಯಿಂದ ಪ್ರತಿಭಟನೆ ನಡೆದಿತ್ತು. ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಳಿದೇಗಲು ಗ್ರಾಮದ ಪ್ರತಾಪ್, ಹೊನಗವಳ್ಳಿ ಮಠ ಗ್ರಾಮದ ಅವಿನಾಶ್, ಕೆರಗೋಡು ಗ್ರಾಮದ ಪ್ರಕಾಶ್ ಸೇರಿ ಇತರರ ವಿರುದ್ಧ IPC ಸೆಕ್ಷನ್ 143, 301, 353, 149 ಅಡಿ ಪ್ರಕರಣ ದಾಖಲಾಗಿದೆ.