ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿ ರಸ್ತೆಯ ಬೈಪಾಸ್ ಬಳಿ ಭೀಮಾನದಿ ಸೇತುವೆಯ ಬಫರ್ ಜೋನ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೆಂಗಿನ ಮರಗಳು ಹಾಗೂ ವೀಳ್ಯದೆಲೆ ತೋಟ ಬೆಂಕಿಗೆ ಆಹುತಿಯಾದ ಘಟನೆ ಸಂಭವಿಸಿದೆ.
ಹಲಗೂರು ಹೊರವಲಯದ ಮುತ್ತತ್ತಿ ರಸ್ತೆಯಲ್ಲಿನ ಬೈಪಾಸ್ ರಸ್ತೆ ಸಮೀಪ, ಭೀಮನದಿ ಸೇತುವೆ ಬಳಿ ಸಂಜೆ ಸುಮಾರು ೫.೩೦ರ ವೇಳೆಗೆ ಈ ಘಟನೆ ಸಂಭವಿಸಿದೆ.
ಇನ್ನು ಭಾರತೀನಗರ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ ಘನತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದ ಪರಿಣಾಮ ಪಕ್ಕದಲ್ಲಿರುವ ರೈತರ ಜಮೀನಿನ ಮರಗಳಿಗೂ ಬೆಂಕಿ ವ್ಯಾಪಿಸಿ ಮರಗಳು ಸುಟ್ಟುಹೋಗಿರುವ ಘಟನೆ ಸಮೀಪದ ಅಣ್ಣೂರು ಗ್ರಾಮದ ಹೊರವಲಯದ ಹೊಂಬೇಗೌಡನದೊಡ್ಡಿ ಗಡಿ ಭಾಗದಲ್ಲಿ ಸಂಭವಿಸಿದೆ.





