Mysore
18
few clouds

Social Media

ಸೋಮವಾರ, 26 ಜನವರಿ 2026
Light
Dark

ವಿಷಾಹಾರ | ತಪ್ಪಿಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಮಂಡ್ಯ: ಮಳವಳ್ಳಿ ತಾಲೂಕಿನ ಕಾಗೇಪುರ ಗ್ರಾಮದ ವಸತಿ ಶಾಲೆಯಲ್ಲಿ ಮೇಘಾಲಯ ಮೂಲಕ ಇಬ್ಬರು ಮಕ್ಕಳ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಮಕ್ಕಳ ಸಾವು ಸೈದ್ಧಾಂತಿಕ ಸಂಚಿನ ಫಲವಾಗಿದ್ದು, ರಾಜ್ಯದಲ್ಲಿ ಈ ರೀತಿ ಈಶಾನ್ಯ ರಾಜ್ಯಗಳಿಂದ ೯೨೩ಕ್ಕೂ ಹೆಚ್ಚು ಮಕ್ಕಳಿದ್ದು, ವಿವಿಧ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಾಹಿತಿ ಇದೆ ಎಂದರು.

ಈಶಾನ್ಯ ರಾಜ್ಯಗಳಿಂದ ಕರೆತರುವ ಮಕ್ಕಳನ್ನು ದಾಸೋಸಕ್ಕೆ ಹೆಸರಾದ ಮಠ, ವಸತಿ ಶಾಲೆಗಳಲ್ಲದೇ, ವಸತಿ ವ್ಯವಸ್ಥೆಯೇ ಇಲ್ಲದ ಶಾಲೆಗಳಲ್ಲಿ ಕಲಿಯುತ್ತಿದ್ದು, ಈ ಮಕ್ಕಳಿಗೆ ಸೈದ್ಧಾಂತಿಕ ಮತ್ತು ದೊಣ್ಣೆ ಹಾಗೂ ಕತ್ತಿ ವರಸೆಯಂತಹ ಶಸ್ತ್ರಾಭ್ಯಾಸ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಇದೀಗ ಸಾವಿಗೀಡಾದ ಮಕ್ಕಳು ಕಿರುಗಾವಲು ಶಾಳೆಯಲ್ಲಿ ದಾಖಲಾತಿ ಹೊಂದಿ ಕಾಗೇಪುರದ ಗೋಕುಲದಲ್ಲಿ ತರಬೇತಿ ಪಡೆಯುತ್ತಿದ್ದರು. ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮಗಳ ಉಳಿದ ಊಟ ಇವರಿಗೆ ನೀಡಲಾಗುತ್ತಿತ್ತು. ಇವರನ್ನು ತೋರಿಸಿ ದಾನಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಂದ ಹಣ ಸಂಗ್ರಹಿಸುವ ಹುನ್ನಾರು ಇರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇಂತಹ ಮಕ್ಕಳನ್ನು ಕರೆತರುವ ಜಾಲದ ಹಿಂದೆ ಆರ್‌ಎಸ್‌ಎಸ್ ಸಂಘಟನೆಯ ಕೈವಾಡವಿರುವ ಸಾಧ್ಯತೆಗಳಿದ್ದು, ಮಕ್ಕಳ ಸಾಗಾಣೆ ಮಾಡುವ ಅಂತರಾಜ್ಯ ಜಾಲವೂ ಇದರಲ್ಲಿ ಕೂಡಿಕೊಂಡಿರುವುದಾಗಿ ಕಾಣುತ್ತಿದ್ದು, ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂದಿಸಿದಂತೆ ಗೋಕುಲ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಅವರನ್ನು ಮೊದಲ ಆರೋಪಿಯಾಗಿ ಮಾಡಿ, ಮಕ್ಕಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು ಎನ್‌ಸಿಪಿಸಿಆರ್ ಪ್ರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಹಾಗೂ ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರ ತಲಾ ೨೫ ಲಕ್ಷ ರೂ ಪರಿಹಾರ ನೀಡಬೇಕು. ಸದರಿ ಪರಿಹಾರವನ್ನು ಲಂಕೇಶ್‌ನಿಂದಲೇ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಭರತ್‌ರಾಜ್.ಎನ್.ಎಲ್, ಸಿ.ಕುಮಾರಿ, ಸುಶೀಲ, ಹನುಮೇಶ್ ಇದ್ದರು.

Tags:
error: Content is protected !!