ಮಂಡ್ಯ : ನಗರದ ಕೆರೆ ಅಂಗಳದಲ್ಲಿ ತಮಿಳು ಸ್ಲಂ ನಿವಾಸಿಗಳಿಗಾಗಿ ಕಟ್ಟಿದ್ದ ಮನೆಗಳು ಅನ್ಯರ ಪಾಲಾಗಿವೆ.
ಸರ್ಕಾರ ಸು.27 ಕೋಟಿ ರೂ ವೆಚ್ಚದಲ್ಲಿ ನಗರದ ಸ್ಲಂ ನಿವಾಸಿಗಳಿಗಾಗಿ 576 ಮನೆಗಳನ್ನು ನಿರ್ಮಿಸಿತ್ತು. ಆದರೆ, ಸ್ಲಂ ನಿವಾಸಿಗಳು ಸ್ಥಳಾಂತರಗೊಳ್ಳದ ಹಿನ್ನೆಲೆ ಮನೆಗಳು ಪಾಳು ಬಿದ್ದಿದ್ದವು.
ಈ ನಡುವೆ ಖಾಲಿ ಮನೆಗಳನ್ನ ಹಿಡಿದುಕೊಂಡ್ರೆ ಆ ಮನೆ ಅವರಿಗೆ ಎಂದು ಸುಳ್ಳು ವದಂತಿ ಹರಡಿದೆ. ಈ ಹಿನ್ನಲೆ ಪಾಳು ಬಿದ್ದಿದ್ದ ಮನೆಗಳಿಗೆ ಫಲಾನುಭವಿಗಳಲ್ಲದ ಅನ್ಯರು ಲಾರಿಗಳ ಮೂಲಕ ತಂಡೋಪ ತಂಡವಾಗಿ ಬಂದು ಮನೆಗಳಿಗೆ ಸೇರಿಕೊಂಡಿದ್ದಾರೆ.
ಸುಳ್ಳು ವದಂತಿ ನಂಬಿದ ಅನ್ಯರು ಖಾಲಿ ಬಿದ್ದಿದ್ದ ಮನೆಗಳಿಗೆ ನುಗ್ಗಿ ಬಾಗಿಲ ಮೇಲೆ ಕುಳಿತು. ನಮಗೆ ಮನೆ ಇಲ್ಲಾ. ಹೀಗಾಗಿ ಖಾಲಿ ಇರುವ ಮನೆ ಜಾಗ ನಾವು ಹಿಡಿದುಕೊಂಡಿದ್ದೀವಿ ಎನ್ನುತ್ತಿದ್ದಾರೆ.
ಸ್ಥಳಕ್ಕೆ ಮಂಡ್ಯ ಪೊಲೀಸರ ಭೇಟಿ ನೀಡಿ, ಸ್ಥಳದಲ್ಲಿ ಜಮಾಯಿಸಿರುವ ಅನ್ಯರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.





