ಮಂಡ್ಯ: ಕಾಡು ಪ್ರಾಣಿಗಳ ಹತ್ಯೆಗೆ ಇಟ್ಟಿದ್ದ ಸಿಡಿ ಮದ್ದು ಸ್ಪೋಟಗೊಂಡು ಸ್ವಚ್ಚತಾ ಕಾರ್ಯಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ನಡೆದಿದೆ.
ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಜೈನಮಠದ ವಸತಿ ನಿಲಯದ ಹರಹಥ್ ಪಾಟೀಲ್ (15) ಹಾಗೂ ಸೌಧರ್ಮ (15) ಗಾಯಗೊಂಡ ವಿದ್ಯಾರ್ಥಿಗಳಾಗಿದ್ದಾರೆ.
ಸ್ವಚ್ಚತಾ ಕಾರ್ಯಕ್ಕಾಗಿ ಇಲ್ಲಿನ ಆಂಜನೇಯ ಬೆಟ್ಟಕ್ಕೆ ಬಂದಿದ್ದ 15 ವಿದ್ಯಾರ್ಥಿಗಳ ಪೈಕಿ ಇವರು ಸ್ವಚ್ಚತಾ ಕಾರ್ಯ ಮಾಡುವಾಗ ಅಕಸ್ಮಾತ್ ಸಿಡಿಮದ್ದು ಮುಟ್ಟಿದ್ದಾರೆ.
ಸಿಡಿಮದ್ದು ಸ್ಪೋಟಕ್ಕೆ ವಿದ್ಯಾರ್ಥಿಗಳ ಕೈ ಹಾಗೂ ಕಾಲಿಗೆ ಗಾಯವಾಗಿದ್ದು, ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಾಣಿಗಳ ಭೇಟಿಗೆ ಎಂದು ಸಿಡಿಮದ್ದು ಇಟ್ಟಿರುವುದಾಗಿ ಹೇಳಲಾಗುತ್ತಿದ್ದು, ನಾಗಮಂಗಲದ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.





