Mysore
27
haze

Social Media

ಗುರುವಾರ, 01 ಜನವರಿ 2026
Light
Dark

ಭಗವಾಧ್ವಜ ಫ್ಲೆಕ್ಸ್ ತೆರವು ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರೊಟೆಸ್ಟ್

ಮಂಡ್ಯ : ಕೆರಗೋಡು ಹನುಮನ ಧ್ವಜ ತೆರವು ರಾಜ್ಯಾದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಧ್ವಜ ತೆರವುಗೊಳಿಸಿದ ಸಂದರ್ಭ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಕೆ.ಆರ್‌ ಪೇಟೆ ಪಟ್ಟಣದ ಟಿಬಿ ವೃತ್ತದಲ್ಲಿ ಹಾರಿಸಿದ್ದ ಭಗವಾಧ್ವಜ ಹಾಗೂ ಅಳವಡಿಸಲಾಗಿದ್ದ ಮಹನೀಯ  ಫ್ಲೆಕ್ಸ್‌ ಅನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದನ್ನ ವಿರೋಧಿಸಿ ಕಾರ್ಯಕರ್ತರು ಪ್ರತಿಭಟನೆ  ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಟಿಬಿ ವೃತ್ತದ ಹತ್ತಾರು ವರ್ಷಗಳಿಂದ ಭಗವಾಧ್ವಜ ಹಾರುತ್ತಿತ್ತು. ಕೆಲ ದಿನಗಳ ಹಿಂದೆ ಪುರಸಭೆ ಧ್ವಜ ತೆರವುಗೊಳಿಸಿತ್ತು. ಹಿಂದೂ ಕಾರ್ಯಕರ್ತರು ಶನಿವಾರ ಮತ್ತೆ ಭಗವಾಧ್ವಜ ಹಾರಿಸಿದ್ದರು. ಇದರ ಜೊತೆಗೆ ಕೆಂಪೇಗೌಡ, ಡಾ.ಬಿ ಆರ್‌ ಅಂಬೇಡ್ಕರ್‌, ಸಂಗೊಳ್ಳಿರಾಯಣ್ಣ, ಬಸವಣ್ಣ ವಿಶ್ವಕರ್ಮ  ಮಡಿವಾಳ ಮಾಚಯ್ಯನವರು, ಆಧ್ಯವಚನಕಾರ ದೇವರ ದಾಸಿಮಯ್ಯ ಸೇರಿ ಹಲವು ಮಹನೀಯರ ಭಾವಚಿತ್ರ ಕಳಸ ಆಕಾರದ ಪ್ಲೆಕ್ಸ್‌ ಅಳವಡಿಸಿದ್ದರು. ಆದರೆ ತಡರಾತ್ರಿ ಪುರಸಭೆ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದೇ ಪೋಲಿಸ್ ಭದ್ರತೆಯಲ್ಲಿ ಭಗವಾಧ್ವಜ ಜೊತೆಗೆ ಧ್ವಜಕಂಬವನ್ನೂ ತೆರವು ಮಾಡಿದ್ದಾರೆ. ಜೊತೆಗೆ ಮಹನೀಯರ ಪ್ಲೆಕ್ಸ್‌ ಕೂಡ ತೆರವು ಮಾಡಿದ್ದಾರೆ.

ಈ ಸಂಬಂಧ ಅಧಿಕಾರಿಗಳ ನಡೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!