ಮಂಡ್ಯ : ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇನ್ನು ಸಕ್ಕರೆ ನಾಡು ಮಂಡ್ಯದಲ್ಲೂ ಕೂಡ ಎರಡು ತಿಂಗಳಲ್ಲಿ ೧೫೦ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ೧೮೯ ಜನರಿಗೆ ಡೆಂಗ್ಯೂ ಬಂದಿದ್ದು, ಪ್ರಕರಣ ಏರಿಕೆಯಿಂದ ಜನರಲ್ಲಿ ಒಂದು ರೀತಿ ಆತಂಕ ಕೂಡ ಹೆಚ್ಚಾಗಿದೆ.
ಇನ್ನು ಡೆಂಗ್ಯೂ ಹೆಚ್ಚಳಕ್ಕೆ ಮನೆಯ ಫ್ರಿಡ್ಜ್ ಗಳೇ ಕಾರಣ ಎಂದು ಆರೋಗ್ಯ ಇಲಾಖೆಗೆ ತಿಳಿಸಿದೆ. ಮನೆಯಲ್ಲಿರುವ ಫ್ರಿಡ್ಜ್ ಗಳು ಸೊಳ್ಳೆಯ ಸಂತಾನೋತ್ಪತಿ ತಾಣವಾಗುತ್ತಿವೆ. ಫ್ರಿಡ್ಜ್ ಗಳಲ್ಲಿ ನಿಲ್ಲುವ ನೀರಿನ ಸೊಳ್ಳೆಗಳ ಲಾರ್ವ ಪತ್ತೆಯಾಗಿದ್ದು, ಸೊಳ್ಳೆಗಳ ಹೆಚ್ಚಳದಿಂದಲೇ ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಹರಡುತ್ತಿದೆ ಎಂದು ಇಲಾಖೆ ತಿಳಿಸಿದೆ.





