ಮಂಡ್ಯ: ಶ್ರೀರಂಗಪಟ್ಟಣ ದಸರಾಗೆಂದು ಮೈಸೂರಿನಿಂದ ತೆರಳಿದ್ದ ಕುಮ್ಕಿ ಆನೆ ಲಕ್ಷ್ಮಿ ಕೆಲಕಾಲ ರಂಪಾಟ ನಡೆಸಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ದಸರಾ ಸಂಭ್ರಮ ಮನೆಮಾಡಿದ್ದು, ನಟ ಶಿವರಾಜ್ ಕುಮಾರ್ ಅವರಿಂದು ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ಮಾಡಲಿದ್ದಾರೆ.
ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ ಅಂಬಾರಿ ಹೊರುವ ಆನೆಯಾಗಿದ್ದು, ಹಿರಣ್ಯ ಮತ್ತು ಲಕ್ಷ್ಮೀ ಆನೆಗಳು ಕುಮ್ಕಿ ಆನೆಗಳಾಗಿವೆ.
ಇಂದು ಇದ್ದಕ್ಕಿದ್ದಂತೆ ಕುಮ್ಕಿ ಆನೆಯಾದ ಲಕ್ಷ್ಮಿ ಕೆಲಕಾಲ ರಂಪಾಟ ನಡೆಸಿದ್ದು, ಜನರನ್ನು ಭಯಭೀತರನ್ನಾಗಿಸಿತ್ತು. ಕೆಲಕಾಲ ದಿಕ್ಕಾಪಾಲಾಗಿ ಓಡಿದ ಲಕ್ಷ್ಮಿ ಆನೆಯನ್ನು ಶಾಂತಳನ್ನಾಗಿಸಲು ಮಾವುತರು ಹರಸಾಹಸ ಪಡುವಂತಾಯಿತು. ಬಳಿಕ ಮಾವುತರು ತಮ್ಮ ಸಮಯ ಪ್ರಜ್ಞೆಯಿಂದ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದರು.