ಮಂಡ್ಯ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದಿದೆ. ಜನರಿಗೆ ಉಚಿತ ಭಾಗ್ಯ ನೀಡುವ ಜೊತೆಗೆ ಉಚಿತವಾಗಿ ಹಣವನ್ನು ದೋಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೂಡ ಹಗರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹರಿಹಾಯ್ದರು.
ನಗರದ ಪತ್ರಕರ್ತರ ಭವನದಲ್ಲಿಂದು(ಆ.7) ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿಗಳೆ ಮೊದಲು, ಆದರೂ ಜನರ ಮುಂದೆ ತಾವು ಸ್ವಚ್ಛ ಎಂದು ಹೇಳುತ್ತಾರೆ ಇದು ಸರಿಯಲ್ಲ. ಮೈಸೂರಿನ ಮೂಡದಲ್ಲಿ 14ದೊಡ್ಡ ನಿವೇಶನವನ್ನು ಕೊಂಡುಕೊಂಡಿದ್ದಾರೆ. ಲಿಂಗ ಹಾಗೂ ಲಿಂಗಮ್ಮ ಎಂಬುವವರ ಸ್ವಯಾರ್ಜಿತ ಆಸ್ತಿಯಾಗಿದ್ದು, 27 ಜನರಿಗೆ ಸೇರಿದ ಜಮೀನನ್ನು ಕೇವಲ ದೇವರಾಜು ಎಂಬ ಒಬ್ಬ ವ್ಯಕ್ತಿಯ ಸಹಿಯನ್ನು ಪಡೆದು ಕೊಂಡುಕೊಂಡಿದ್ದಾರೆ ಎಂದು ಮೂಡದಲ್ಲಿ ನಿವೇಶನ ಪಡೆದಿರುವ ಕುರಿತು ದಾಖಲೆ ಸಮೇತ ವಿವರಣೆ ನೀಡಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಶ್ವಥ್ ನಾರಾಯಣ್.ಛಲವಾದಿ ನಾರಾಯಣಸ್ವಾಮಿ. ಅರವಿಂದ್ ಬೆಲ್ಲದ್. ರಮೇಶ್ ಗೌಡ. ಶಾಸಕ ಕೆ. ಗೋಪಾಲಯ್ಯ ಉಪಸ್ಥಿತರಿದ್ದರು.





