Mysore
17
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಅಂಗಡಿ ಮಳಿಗೆಗಳ ಒತ್ತುವರಿ ಜಾಗ ತೆರವು

Clearance of encroached areas of shops and stores

ನಾಗಮಂಗಲ : ಸಾರ್ವಜನಿಕರ ದೂರು ಹಾಗೂ ಪಾದಚಾರಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳು ಪೊಲೀಸರ ರಕ್ಷಣೆಯಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆಗಳ ಮುಂದೆ ಹೆಚ್ಚುವರಿ ಜಾಗವನ್ನು ಆಕ್ರಮಿಸಿಕೊಂಡಿದ್ದ ಜಾಗವನ್ನು ಬುಧವಾರ ತೆರವುಗೊಳಿಸಿದರು.

ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸಿ. ಶ್ರೀನಿವಾಸ್ ಮತ್ತು ಕಂದಾಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಪುರಸಭೆ ಕಚೇರಿ ಸಿಬ್ಬಂದಿಗಳು ಪಟ್ಟಣದ ವ್ಯಾಪ್ತಿಯ ವಾಣಿಜ್ಯ ಅಂಗಡಿ ಮಳಿಗೆಗಳ ಮುಂಭಾಗ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡಿಕೊಂಡಿದ್ದ ಮಾಲೀಕರಿಗೆ ಪುರಸಭೆ ವತಿಯಿಂದ ಹಲವು ಬಾರಿ ತಿಳವಳಿಕೆ ಹೇಳಿ ನೋಟಿಸ್ ಜಾರಿ ಮಾಡಿದ್ದರೂ ಅಕ್ರಮ ಒತ್ತುವರಿ ಜಾಗ ತೆರವು ಗೊಳಿಸಿರಲಿಲ. ಇದನ್ನು ಮನಗಂಡ ಪುರಸಭೆ ಅಧಿಕಾರಿಗಳು ಬುಧವಾರ ಟಿಬಿ ಬಡಾವಣೆಯ ಕೋಟೆಬೆಟ್ಟ ರಸ್ತೆಯ ಹತ್ತಕ್ಕೂ ಹೆಚ್ಚು ಮಳಿಗೆಗಳ ಮುಂಭಾಗದ ಒತ್ತುವರಿ ಜಾಗವನ್ನು ತೆರವುಗೊಳಿಸಿದರು.

ಈ ಸಂಬಂಧ ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಅಕ್ರಮವಾಗಿ ತಮ್ಮ ವ್ಯಾಪ್ತಿಯ ಮೀರಿ ಜಾಗವನ್ನು ಹೊತ್ತುವರಿ ಮಾಡಿಕೊಂಡಿರುವ ಅಂಗಡಿ ಮಾಲೀಕರ ಬಗ್ಗೆ ಪುರಸಭೆ ಸದಸ್ಯರು ಮತ್ತು ಸಚಿವರ ಬಳಿ ಈಗಾಗಲೇ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರಿ ರಸ್ತೆ ಸುಗಮ ಮಾಡುವ ಉದ್ದೇಶದಿಂದ ಈ ಕ್ರಮ ಜರುಗಿಸಲಾಗಿದೆ ಪಟ್ಟಣದ ಪ್ರಮುಖರಸ್ತೆ ವ್ಯಾಪಾರೀಕರಣದ ರಸ್ತೆಗಳಲ್ಲಿ ವ್ಯಾಪಾರಸ್ಥರು ಆಕ್ರಮವಾಗಿ ರಸ್ತೆ ಬದಿಯಲ್ಲಿ ಅಂಗಡಿ ಸಾಮಾನುಗಳನ್ನು ಜೋಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಇದು ಅಪರಾಧವಾಗುತ್ತದೆ ಹಿಂದಿನಿಂದ ಕಾರ್ಯಾಚರಣೆಗೆ ಸಾರ್ವಜನಿಕರು ಒತ್ತಾಯವಿದೆ. ವ್ಯಾಪಾರಸ್ಥರು ಪುರಸಭೆಗೆ ಸಹಕರಿಸಿ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ವ್ಯಾಪಾರ ಮಾಡಬೇಕು ಹಾಗೂ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳು ನಿಗದಿಪಡಿಸಿದ ಜಾಗವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಲ್ಲಿ ವ್ಯಾಪಾರ ಮಾಡುತ್ತಿದ್ದು, ಇದು ಅಪರಾಧವಾಗಿರುತ್ತದೆ. ಪುರಸಭೆಗೆ ಮಾಹಿತಿ ನೀಡಿ ನಿಮಗೆ ನಿಗದಿ ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಬೇಕು ಎಂದು ತಿಳಿಸಿದ್ದಾರೆ.

Tags:
error: Content is protected !!