Mysore
18
overcast clouds

Social Media

ಬುಧವಾರ, 28 ಜನವರಿ 2026
Light
Dark

ಬಸವಣ್ಣ ಜಗತ್ತಿನ ಬೆಳಕು ; ಸಚಿವ ಚಲುವರಾಯಸ್ವಾಮಿ ಬಣ್ಣನೆ

cheluvaraya swamy basavanna

ಮಂಡ್ಯ : ವಿಶ್ವಗುರು ಬಸವಣ್ಣನವರು ತಮ್ಮ ತತ್ವ, ವಕ್ತಿತ್ವ, ಚಿಂತನೆ ಹಾಗೂ ಆದರ್ಶಗಳ ಮೂಲಕ ಜಗತ್ತಿಗೆ ಬೆಳಕಾದವರು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಅವರು ಮಾತನಾಡಿದರು.

ಬಸವಣ್ಣ ಹಣ, ಆಡಳಿತ ಹಾಗೂ ಅಧಿಕಾರದಿಂದ ಪ್ರಸಿದ್ದಿಯೊಂದಿದವರಲ್ಲ. ಅವರು ತಮ್ಮ ವ್ಯಕ್ತಿತ್ವದಿಂದ ಜಗತ್ಪ್ರಸಿದ್ಧಿ ಹೊಂದಿದವರು ಅವರಂತ ಮತ್ತೊಬ್ಬ ವ್ಯಕ್ತಿ ಜನಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎಲ್ಲಾ ಜಾತಿ, ಧರ್ಮದವರು ಒಪ್ಪುವ ನಾಯಕ ಬಸವಣ್ಣನವರು ಎಂದರೆ ತಪ್ಪಾಗುವುದಿಲ್ಲ. ಸಮಾಜದ ಒಗ್ಗಟ್ಟಿಗಾಗಿ 12ನೇ ಶತಮಾನದಲ್ಲಿ ಅವರು ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.

ಸಮಾಜದ ಒಳಿತು ಹಾಗೂ ಸಮಾನತೆಗಾಗಿ ಮುಂದಿನ ಪೀಳಿಗೆಗಳಿಗೆ ಬಸವಣ್ಣನವರ ತತ್ವ ಮತ್ತು ಆದರ್ಶಗಳ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ ಮಾತನಾಡಿ, 12 ನೇ ಶತಮಾನದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆಯನ್ನು ಕಲ್ಪಿಸಬೇಕೆಂಬ ಅವರ ಚಿಂತನೆ ಇಂದು ಕಾನೂನಿನ ಸಮಾನತೆ ಹಕ್ಕಾಗಿ ಪರಿವರ್ತನೆಗೊಂಡಿದೆ ಎಂದರು.

ದ್ವೇಷದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ, ಎಲ್ಲರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎನ್ನುವಂತಹದ್ದು ಅವರ ಆಶಾಯವಾಗಿತ್ತು. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ತಿಳುವಳಿಕೆ ಹೇಳಿದರು.

ಡಾ. ಎಸ್. ಶಿವರಾಜಪ್ಪ ಬಸವಣ್ಣ ಅವರ ಬಗ್ಗೆ ವಿಶೇಷ ಉಪನ್ಯಾನ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಪಿ. ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಮತ್ತು ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Tags:
error: Content is protected !!