ಶ್ರೀರಂಗಪಟ್ಟಣ: ತಾಲ್ಲೂಕಿನ ಮಂಡ್ಯದಕೊಪ್ಪಲು ಗ್ರಾಮ ಹೊರವಲಯದ ಶ್ರೀಕಾವೇರಿ ಬೋರೇದೇವರ ದೇವಾಲಯ ಸಮೀಪದಲ್ಲಿ ಶನಿವಾರ ಸಂಜೆ ನಾಲೆಯ ನೀರಿನಲ್ಲಿ ಮೂವರು ಬಾಲಕಿಯರು ಕೋಚ್ಚಿಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಸ್ಧಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.
ತಾಲ್ಲೂಕಿನ ಮಂಡ್ಯದಕೊಪ್ಪಲು ಗ್ರಾಮದ ಹೊರವಲಯದ ಶ್ರೀಕಾವೇರಿ ಬೋರೇದೇವರ ದೇವಾಲಯದ ಸಮೀಪದಲ್ಲಿ ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಹನಿ (14), ಅಫ್ರಿನ್ (13), ಜಾನಿಯಾ ಪರ್ವೀನ್ (13) ಎಂಬ ಬಾಲಕಿಯರು ಕೊಚ್ಚಿಹೋಗಿದ್ದರು. ಇವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಕಾರ್ಯಾಚರಣೆ ಆರಂಭಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.





