Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಿ.ನಾಲೆಗೆ ಕಾರು ಪಲ್ಟಿ : ಚಾಲಕ ಸಾವು

ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಕಾರು ವಿ.ನಾಲೆಗೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಿಬ್ಬನಹಳ್ಳಿ ಸಮೀಪ ನಡೆದಿದೆ. ತಾಲ್ಲೂಕಿನ ಶಿವಳ್ಳಿ ಗ್ರಾಮದ ಲೋಕೇಶ್ (44) ಮೃತ ವ್ಯಕ್ತಿ.

ಲೋಕೇಶ್ ಅವರು ಗುರುವಾರ ಬೆಳಿಗ್ಗೆ ಶಿವಳ್ಳಿ ಗ್ರಾಮದಿಂದ ಪಾಂಡವಪುರದ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಕಾರು ವಿ.ನಾಲೆಗೆ ಹಾರಿದೆ. ಲೋಕೇಶ್ ಅವರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ.

ಕಾಲುವೆಯಲ್ಲಿ ಹೆಚ್ಚು ನೀರು ಇರುವ ಕಾರಣ ಕಾರು ಮತ್ತು ಲೋಕೇಶ್ ಅವರ ಮೃತದೇಹವನ್ನು ಮೇಲೆತ್ತಲು ಕಾಲುವೆಯ ನೀರನ್ನು ಕಡಿಮೆ ಮಾಡಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಡೆಗೋಡೆ ಇಲ್ಲ : ಈ ಘಟನೆ ನಡೆಯಲು ಕಾಲುವೆಗೆ ತಡೆಗೋಡೆ ಇಲ್ಲದಿರುವುದೇ ಕಾರಣವಾಗಿದ್ದು, 2017 ರಲ್ಲೂ ತಡೆಗೋಡೆ ಇಲ್ಲದೇ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ಬಸ್ ದುರಂತ ಸಂಭವಿಸಿ 34 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ವಿ.ನಾಲೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲೆಲ್ಲ ತಡೆಗೋಡೆ ನಿರ್ಮಿಸುವುದಾಗಿ ಅಂದಿನ ಸರ್ಕಾರ ಹೇಳಿತ್ತು. ಇಷ್ಟಾದರೂ ಸರ್ಕಾರ ತಡೆಗೋಡೆ ನಿರ್ಮಾಣ ಮಾಡದ ಕಾರಣ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ