ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯ ಸಮೀಪವಿರುವ ನಾರ್ಥ್ ಬ್ಯಾಂಕ್ ಬಳಿಯ ಕಾಲುವೆಯಲ್ಲಿ ಸ್ಯಾಂಟ್ರೋ ಕಾರೊಂದು ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕುಮಾರಸ್ವಾಮಿ(38), ಅದ್ವೈತ್(8), ಅಕ್ಷತಾ(3) ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಇವರು ಏಪ್ರಿಲ್.16ರಂದು ಬೆಂಗಳೂರಿನಿಂದ ಕೆ.ಆರ್.ನಗರಕ್ಕೆ ಕಾರಿನಲ್ಲಿ ಹೊರಟಿದ್ದರು. ಆದರೆ ಮನೆಗೆ ತಲುಪದ ಹಿನ್ನೆಲೆಯಲ್ಲಿ ಇವರು ಕಾಣೆಯಾಗಿರುವ ಬಗ್ಗೆ ಏಪ್ರಿಲ್.19ರಂದು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:- ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ
ಈ ಮಧ್ಯೆ ನಾಲೆಯಲ್ಲಿ ಮಂಗಳವಾರ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನಾಲೆಯಲ್ಲಿ ಸ್ಯಾಂಟ್ರೋ ಕಾರು ಬಿದ್ದಿರುವುದು ಬೆಳಕಿಗೆ ಬಂದಿದೆ. ಕಾರನ್ನು ಪರಿಶೀಲಿಸಿದಾಗ ಅದರೊಳಗೆ ಮೂವರ ಶವಗಳು ಪತ್ತೆಯಾಗಿವೆ.



