ಮಂಡ್ಯ: ಬಿಹಾರದಲ್ಲಿನ ಬೌದ್ಧಗಯಾ ಕೇಂದ್ರದ ಸಂಪೂರ್ಣ ಆಡಳಿತವನ್ನು ಮೂಲ ಬುದ್ಧ ಅನುಯಾಯಿಗಳಿಗೆ ಬಿಡಿಸಿಕೊಡುಬೇಕು ಎಂದು ಬೆಂಗಳೂರಿನ ಸ್ಪೂರ್ತಿಧಾಮದ ಧಮ್ಮವೀರ ಬಂತೇಜಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರದ ಬೌದ್ಧಗಯಾ ಕೇಂದ್ರವು ಹಿಂದಿನಿಂದ ಬುದ್ಧರ ಅನುಯಾಗಿಗಳಾಗಿ ಬೌದ್ಧರ ಸಿದ್ದಾಂತಗಳನ್ನು ಪಾಲಿಸುವವರಿಗೆ ನೀಡಬೇಕು ಎಂದರು.
ಈ ನಿಟ್ಟಿನಲ್ಲಿ ಸದರಿ ಕೇಂದ್ರವನ್ನು ಬೌದ್ಧರಿಗೆ ವಹಿಸಬೇಕು ಎಂಬ ಜಾಗೃತಿಯನ್ನು ರಾಷ್ಟ್ರಾದ್ಯಂತ ಮೂಡಿಸಲಾಗುತ್ತಿದೆ. ಕೂಡಲೇ ಸಂಬಂಧಿತರು ಕೂಡಲೇ ಬೌದ್ಧ ಧಮ್ಮ ಅನುಯಾಗಿಗಳಿಗೆ ಬೌದ್ಧ ಗಯಾದ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ವಹಿಸಿಕೊಟ್ಟು. ಈ ವಿಷಯವಾಗಿ ನಡೆಯುತ್ತಿರುವ ಸಂಘರ್ಷಗಳಿಗೆ ಪೂರ್ಣ ವಿರಾಮ ಹಾಕಲು ಮುಂದಾಗಬೇಕು ಎಂದು ಕೋರಿದರು.
ಬೌದ್ಧ ಧಮ್ಮ ಸ್ವೀಕರಿಸಿ ಬುದ್ದರ ಅನುಯಾಯಿಗಳಾದವರು ಎಸ್ಸಿ, ಎಸ್ಟಿ ಕಾಯ್ದೆಯಡಿ ಸರ್ಕಾರದಿಂದ ನೀಡಲಾಗುವ ಸವಲತ್ತುಗಳನ್ನು ಸ್ವೀಕರಿಸುವುದು ಅಕ್ಷಮ್ಯ ಅಪರಾಧ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್‍ಸ್‌ನ ಅಧ್ಯಕ್ಷ ಹೆಚ್.ಜಿ.ಗಂಗರಾಜು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಗೋಷ್ಠಿಯಲ್ಲಿ ಬುದ್ಧ ಭಾರತ ಫೌಂಡೇಷನ್‌ನ ಅಧ್ಯಕ್ಷ ಜೆ.ರಾಮಯ್ಯ, ಅಮ್ಜದ್ ಪಾಷ, ಡಾ.ಶ್ರೀನಿವಾಸ್, ಸಿದ್ದರಾಮು ಇದ್ದರು.





