Mysore
25
haze

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮಂಡ್ಯ | ಜಿಲ್ಲೆಗೆ ಆಗಮಿಸಿದ ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ರಥಯಾತ್ರೆ

basavadi sharanara vaibhava rathayatre

ಮಂಡ್ಯ : ಬಸವ ಜಯಂತಿ ಅಂಗವಾಗಿ ರಾಜ್ಯಾದ್ಯಂತ 15 ಜಿಲ್ಲೆಗಳಲ್ಲಿ ಏಪ್ರಿಲ್ 17 ರಿಂದ 29 ರವರೆಗೆ ಸಂಚರಿಸುತ್ತಿರುವ “ಅನುಭವ ಮಂಟಪ – ಬಸವಾದಿ ಶರಣರ ವೈಭವ” ರಥಯಾತ್ರೆ ಶುಕ್ರವಾರ ಜಿಲ್ಲೆಗೆ ಆಗಮಿಸಿದೆ.

ಜಿಲ್ಲಾಧಿಕಾರಿ ಡಾ.ಕುಮಾರ ರಥಯಾತ್ರೆಯನ್ನು ಬರಮಾಡಿಕೊಂಡ ಜಿಲ್ಲೆಯ ಸಂಚಾರದ ಯಾತ್ರೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬಸವಣ್ಣನವರು ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ. ಅವರು ಇಡೀ ಜಗತ್ತಿಗೆ ವಿಶ್ವ ಗುರು ಆದವರು. ಅವರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಚಿಂತಕರಾಗಿ, ವಚನಕಾರರಾಗಿ 12 ನೇ ಶತಮಾನದಿಂದ ಇಲ್ಲಿಯವರೆಗೂ ಅವರು ಸಮಾಜಕ್ಕೆ ನೀಡಿರುವ ಬೋಧನೆಗಳು, ಚಿಂತನೆಗಳು, ಮೌಲ್ಯಗಳು ಹಾಗೂ ಆದರ್ಶಗಳು ನಿಜಕ್ಕೂ ಅಪಾರ ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದರು.

ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಮಹತ್ತರ ಬದಲಾವಣೆಯ ಆಶಯವನ್ನು ಕಂಡಂತಹ ಮಹಾನ್ ಮಾನವತವಾದಿ ಬಸವಣ್ಣರವರು. ಇಂದು ಅವರ ಜಯಂತಿ ಅಂಗವಾಗಿ ಸರ್ಕಾರ ಕೈಗೊಂಡಿರುವ ಅನುಭವ ಮಂಟಪ – ಬಸವಾದಿ ಶರಣರ ವೈಭವ ರಥಯಾತ್ರೆಗೆ ಚಾಲನೆ ನೀಡಿದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಇಂತಹ ಮಹಾನ್ ಚಿಂತಕರ ಆದರ್ಶಗಳನ್ನು ನಾಡಿನಾದ್ಯಂತ ಪಸರಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಸರ್ಕಾರವು ಏಪ್ರಿಲ್ 29 ಹಾಗೂ 30 ರಂದು ಅನುಭವ ಮಂಟಪ ಬಸವಾದಿ ಶರಣರ ವೈಭವ ಎಂಬ ಪರಿಕಲ್ಪನೆಯಲ್ಲಿ ಎರಡು ದಿನದ ಕಾರ್ಯಕ್ರಮವನ್ನು ಸಹ ಕೂಡಲಸಂಗಮದಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ರೆಡ್ ಕ್ರಾಸ್ ಸಭಾಧ್ಯಕ್ಷ ಡಾ. ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಸಮುದಾಯ ಮುಖಂಡರುಗಳಾದ ಎಲ್.ಸಂದೇಶ್, ರಂಗಸ್ವಾಮಿ, ಎಂ. ವಿ ಧರಣೇಂದ್ರಯ್ಯ, ಮಂಜುನಾಥ ಬೆಟ್ಟಹಳ್ಳಿ, ರುದ್ರಸ್ವಾಮಿ, ಕೆಂಪಯ್ಯ ಸೇರಿದಂತೆ ಇನ್ನಿತರರಿದ್ದರು.

Tags:
error: Content is protected !!