Mysore
18
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಅಣ್ಣೂರು ಗ್ರಾ.ಪಂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

annoor

annoorಮಂಡ್ಯ: ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ರಂಗೋಲಿಗಳನ್ನು ಬಿಡಿಸಿ ದಾಖಲೆ ನಿರ್ಮಿಸಿದ ಅಣ್ಣೂರು ಗ್ರಾಮ ಪಂಚಾಯತ್ ಸಾಧನೆ `ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸೇರ್ಪಡೆ ಆಗಿದೆ.

ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸುತ್ತಾ ಗಮನ ಸೆಳೆದಿರುವ ಅಣ್ಣೂರು ಗ್ರಾಮ ಪಂಚಾಯತ್ ಮುಕುಟಕ್ಕೆ ಈ ಮೂಲಕ ಮತ್ತೊಂದು ಗರಿ ಸಿಕ್ಕದಂತಾಗಿದೆ.

ಮಹಿಳಾ ಸಶಕ್ತೀಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ 2025ರ ಏ.25ರಂದು ರಂಗೋಲಿ ರಚಿಸುವ ಚಟುವಟಿಕೆಯನ್ನು ಅಣ್ಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 3 ಗ್ರಾಮಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ:-ಮಂಡ್ಯ| ಶಾಸಕ ರವಿಕುಮಾರ್‌ ಗಣಿಗ ವಿರುದ್ಧ ಪ್ರಗತಿಪರ ಸಂಘಟನೆ ಮುಖಂಡರ ಆಕ್ರೋಶ

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣೂರು, ಆಲಭುಜನಹಳ್ಳಿ ಮತ್ತು ಕಾರ್ಕಳ್ಳಿ ಗ್ರಾಮಗಳಿಂದ ಒಟ್ಟು 1544 ಮಂದಿ ಭಾಗವಹಿಸಿದ್ದರು. ಅಕ್ಕಿ ಹಿಟ್ಟು, ಅರಿಶಿನ ಪುಡಿ ಮತ್ತು ಬಣ್ಣದ ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಒಟ್ಟಾರೆ 1418 ರಂಗೋಲಿಗಳನ್ನು ರಚಿಸಿ ಗಮನ ಸೆಳೆದಿದ್ದರು.

Tags:
error: Content is protected !!