Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜನಸ್ಪಂದನ ಕಾರ್ಯಕ್ರಮದಲ್ಲಿ ದಯಾಮರಣ ಕೋರಿದ ಮಂಡ್ಯದ ಅಂಗವಿಕಲ ಮಹಿಳೆ

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೀನಾ ಎಂಬ ಮಹಿಳೆಯು ಸಿಎಂ ಸಿದ್ದರಾಮಯ್ಯ ಅವರ ಎರಡನೇ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ದಯಾಮರಣ ನಿಡುವಂತೆ ಮನವಿ ಮಾಡಿದ ಪ್ರಸಂಗ ನಡೆಯಿತು.

ಇಂದು ವಿಧಾನಸೌಧ ಆವರಣದಲ್ಲಿ ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ಮಂಡ್ಯ ಮೂಲದ ಅಂಗವಿಕಲ ಮಹಿಳೆಯೊಬ್ಬರು ತಮ್ಮ ಕಷ್ಟಗಳಿಂದ ಶಾಸ್ವತ ಪರಿಹಾರಕ್ಕಾಗಿ ಜನ ಸ್ಪಂದನಾ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು.

ನಾನು ಅಂಗವಿಕಲೆ ನನಗೆ ಯಾರೂ ಕೆಲಸ ಕೊಡುತ್ತಿಲ್ಲ. ನನ್ನ ಪತಿ ಕೋವಿಡ್​ಗೆ ಬಲಿಯಾದರು. ನನ್ನ ಮಗನ ಓದಿಗೆ ಕಷ್ಟ ಆಗುತ್ತಿದ್ದು, ನಮಿಬ್ಬರಿಗೂ ದಯಾಮರಣ ಕೇಳಲು ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿರುವುದಾಗಿ ನೊಂದ ಮಹಿಲೆ ಹೇಳಿರುವುದಾಗಿ ಖಾಸಗಿ ವಾಹಿನಿ ಟಿವಿ-9 ವರದಿ ಮಾಡಿದೆ.

ಮೂರು ವರ್ಷಗಳ ಹಿಂದೆ ನನ್ನ ಗಂಡ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ನನಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಾನು ಕೂಡ ಅಂಗವಿಕಲೆ. ನಾನು ಅಂಗವಿಕಲೆ ಎಂದು ಯಾರೂ ಕೆಲಸ ಕೊಡುತ್ತಿಲ್ಲ. ನನ್ನ ಮಗನ ಓದಿಗಾಗಿ ಸಹಾಯ ಮಾಡಬೇಕು. ನಾನು ಕೆಲಸ ಕೇಳಿದರೆ ನನ್ನನ್ನ ಕೆಟ್ಟದಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ನಮಗೆ ದಯಾಮರಣ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶ್ರೀರಂಗಪಟ್ಟಣದ ಶಾಸಕರ ಬಳಿ 2 ಬಾರಿ ಸಮಸ್ಯೆ ಕೇಳಿಕೊಂಡಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಗಂಡ ಕೋವಿಡ್​ನಿಂದ ಮೃತಪಟ್ಟಾಗ ಅಂಬರೀಶ್ ಅವರ ಮಗ ಮನೆಗೆ ಬಂದು ಸಹಾಯ ಮಾಡುವುದಾಗಿ ಹೇಳಿದ್ದರು. ಅವರು ಕೂಡ ಸಹಾಯ ಮಾಡಲಿಲ್ಲ ಎಂದು ಮೀನಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ