ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದಿಂದ ನಿನ್ನೆ ( ಮಾರ್ಚ್ 9 ) 4000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರ ವಿರುದ್ಧ ಕಿಡಿಕಾರಿರುವ ರೈತರು ಆಕ್ರೋಶ ಹೊರಹಾಕಿದ್ದಾರೆ.
ʼಕುಡಿಯುವ ಉದ್ದೇಶಕ್ಕಾಗಿ ಬೆಂಗಳೂರಿಗೆ 700 ಕ್ಯೂಸೆಕ್ ನೀರು ಸಾಕು, ಆದರೆ 4000 ಕ್ಯೂಸೆಕ್ ನೀರು ಬಿಡುವ ಅಗತ್ಯವೇನಿತ್ತು? ತಮಿಳುನಾಡಿಗೆ ನೀರು ಕೊಡುವ ಉದ್ದೇಶ ಸರ್ಕಾರದ್ದುʼ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.
ಈಗಾಗಲೇ ಬೇಸಿಗೆಯ ಪ್ರಭಾವ ಕಾವೇರಿ ನೀರಿನ ಮೇಲೆ ಬಿದ್ದಿದ್ದು, ನೀರಿನ ಅಭಾವ ಉಂಟಾಗಿದೆ. ಕಳೆದ ವರ್ಷದಿಂದ ಸಾಕಷ್ಟು ಬಾರಿ ತಮಿಳುನಾಡಿಗೆ ನೀರು ಹರಿಸಿರುವ ಕರ್ನಾಟಕ ಇಂತಹ ಕಠಿಣ ಸಂದರ್ಭದಲ್ಲಿ ನೀರು ಹರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.




