ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದಲ್ಲೀಗ ಕತ್ತಲಾಗುತ್ತಿದ್ದಂತೆ ಜನರು ಮನೆ ಸೇರಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಇಲ್ಲಿನ ರೈಲ್ವೇ ಗೇಟ್ ಬಳಿ ರೈಲುಕಂಬಿ ದಾಟಿ ಗ್ರಾಮದತ್ತ ಸಾಗುತ್ತಿರುವ ದೃಶ್ಯ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.
ಚಂದಗಿರಿಕೊಪ್ಪಲು ಗ್ರಾಮದ ಮಹೇಶ್ ಎಂಬವರ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ. ಅರಣ್ಯ ಇಲಾಖೆ ಕೂಡಲೇ ಚಿರತೆ ಸೆರೆಗೆ ಗಂಭೀರ ಕ್ರಮ ಕೈಗೊಂಡು ಸೆರೆ ಹಿಡಿಯಬೇಕು. ಶಾಲಾ ಕಾಲೇಜು ಮಕ್ಕಳು ಹಾಗೂ ಗದ್ದೆಗಳಿಗೆ ತೆರಳುವ ರೈತರು, ರಾತ್ರಿ ವೇಳೆ ವಿವಿಧೆಡೆಯಿಂದ ರೈಲಿನಲ್ಲಿ ಬಂದಿಳಿಯುವ ಜನರಿಗೆ ಚಿರತೆ ದಾಳಿ ಮಾಡಬಹುದು. ಆದ್ದರಿಂದ ಅರಣ್ಯ ಇಲಾಖೆ ತ್ವರಿತವಾಗಿ ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದ್ದು, ಹಲವಾರು ಜಾನುವಾರುಗಳನ್ನು ಕೊಂದು ಹಾಕಿವೆ.



