Mysore
25
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಮಂಡ್ಯ: ಮಾಜಿ ವಿಧಾನಪರಿಷತ್ ಸದಸ್ಯ ಇಂಡವಾಳು ಹೆಚ್ ಹೊನ್ನಪ್ಪ ವಿಧಿವಶ

ಮಂಡ್ಯ : ವಿಧಾನ ಪರಿಷತ್ ಮಾಜಿ ಸದಸ್ಯ ಇಂಡವಾಳು ಹೆಚ್.ಹೊನ್ನಪ್ಪ ವಿಧಿವಶರಾಗಿದ್ದಾರೆ. ಇಂಡವಾಳು ಹೊನ್ನಯ್ಯನವರ ಪುತ್ರ ಹೊನ್ನಪ್ಪ ಅವರು ಸೂಕ್ಷ್ಮ ಮನಸ್ಸಿನ ವ್ಯಕ್ತಿತ್ವ ಹೊಂದಿ ಜನಪ್ರಿಯ ನಾಯಕರಾಗಿದ್ದರು. ಪಿಇಟಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೂಡ ಆಗಿ ಸೇವೆ ಸಲ್ಲಿಸಿದ್ದರು. ಎಸ್.ಡಿ ಜಯರಾಂ, ಎಂ ಎಸ್ ಆತ್ಮಾನಂದ ಮದ್ದೂರಿನ ಎಂ ಎಸ್ ಸಿದ್ದರಾಜು ಸೇರಿದಂತೆ ಅಪಾರ ಒಡನಾಡಿಗಳನ್ನು ಹೊಂದಿದ್ದ ಇವರು ಇಂದು ಇಹಲೋಕ ತ್ಯಜಿಸಿದ್ದಾರೆ.ಮಂಡ್ಯ ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಇವರು ಮೈಷುಗರ್ ಅಧ್ಯಕ್ಷರೂ ಅಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಬೆಳಗ್ಗೆ ಮನೆಯಲ್ಲಿ ವಿಧಿವಶರಾಗಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಇಂದು ಸಂಜೆ 4 ಗಂಟೆಗೆ ಇಂಡವಾಳು ಗ್ರಾಮದಲ್ಲಿ ನೆರವೇರಲಿದೆ. ಹೆಚ್.ಹೊನ್ನಪ್ಪ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!