ನಿನ್ನೆ ( ಜನವರಿ 8 ) ಚನ್ನಪಟ್ಟಣದಿಂದ ತಿ ನರಸೀಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಸವಿತಾ ಎಂಬಾಕೆ ಮಳವಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದಾಗ ತನ್ನ ಏಳು ತಿಂಗಳ ಮಗುವನ್ನು ಅಪರಿಚಿತ ಮಹಿಳೆ ಎತ್ತಿಕೊಂಡು ಹೊರಟು ಹೋಗಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ಬಸ್‌ನಲ್ಲಿ ಜನಸಂದಣಿ ಇದ್ದ ಕಾರಣ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಗೆ ಮಗು ಹಿಡಿದುಕೊಳ್ಳಲು ಕೊಟಿದ್ದೆ ಎಂದು ಹೇಳಿದ್ದರು.
ಈ ವಿಷಯ ತಿಳಿದ ಕೂಡಲೇ ಪಟ್ಟಣ ಪೊಲೀಸರು ಆರೋಪಿಯ ಪತ್ತೆಗೆ ಕ್ರಮವನ್ನೂ ಸಹ ಕೈಗೊಂಡಿದ್ದರು. ಇನ್ನು ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಹಾಗೂ ಸ್ಥಳೀಯರು ಸವಿತಾಳನ್ನು ಸಂತೈಸಿದ್ದರು. ಆದರೆ ಈ ಪ್ರಕರಣಕ್ಕೀಗ ದೊಡ್ಡ ತಿರುವೊಂದು ಸಿಕ್ಕಿದ್ದು, ಅಸಲಿ ವಿಷಯ ಹೊರಬಿದ್ದಿದೆ.
ಹೌದು, ಅಸಲಿಗೆ ಆರೋಪ ಮಾಡಿದ್ದ ಸವಿತಾಗೆ ಮಗು ಇಲ್ಲ ಎಂಬ ವಿಷಯ ನಂತರದ ತನಿಖೆಯಿಂದ ತಿಳಿದುಬಂದಿದೆ. ಇನ್ನು ಮಗು ಹುಡುಕಲು ಆಕೆ ನೀಡಿದ್ದ ಫೋಟೊ ಸಹ ಬೇರೆ ಮಗುವಿನದ್ದು ಎಂಬ ಅಂಶ ತಿಳಿದುಬಂದಿದ್ದು, ಆ ಮಗುವಿನ ತಂದೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ





