Mysore
25
scattered clouds

Social Media

ಶನಿವಾರ, 16 ಮೇ 2026
Light
Dark

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಮಳವಳ್ಳಿ: ದೇವಸ್ಥಾನದ ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ನೀರಿನ ತೊಟ್ಟಿಯಲ್ಲಿ ನೀರು ತೆಗೆದುಕೊಳ್ಳುವ ವೇಳೆ ವಿದ್ಯುತ್ ಸ್ವರ್ಶಿಸಿ ಮೃತಪಟ್ಟ ಘಟನೆ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೂಲತಃ ತಮಿಳುನಾಡು ನಿವಾಸಿ ಗಣೇಶ್ (೨೨) ಮೃತಪಟ್ಟ ಕಾರ್ಮಿಕ.
ಮೃತ ಗಣೇಶ ಹಾಗೂ ಸಹಪಾಟಿಗಳು ಈಶ್ವರ ದೇವಸ್ಥಾನ ಕಟ್ಟಡದ ಕೆಲಸ ಮಾಡಲು ತಮಿಳುನಾಡಿನಿಂದ ಆಗಮಿಸಿದ್ದರು. ಶುಕ್ರವಾರ ಈಶ್ವರ ದೇವಸ್ಥಾನದ ಬಳಿ ನೀರಿನ ತೊಟ್ಟಿನಲ್ಲಿ ನೀರು ತೆಗೆದುಕೊಳ್ಳುವ ವೇಳೆ ಗಣೇಶನಿಗೆ ವಿದ್ಯುತ್ ಸ್ವರ್ಶಿಸಿ ಮೃತಪಟ್ಟಿದ್ದಾನೆ.
ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಶವ ಪರೀಕ್ಷೆ ನಂತರ ವಾರಸುದಾರರಿಗೆ ನೀಡಲಾಯಿತು.
ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!