ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ಮತ್ತೊಂದು ವಿಶೇಷವಾದ ಮಹಿಷ ದಸರಾಗೆ ಆಚರಣೆಯ ಸಮಿತಿ ವತಿಯಿಂದ ಸಿದ್ಧತೆ ನಡೆಸಲಾಗಿತ್ತಾದರೂ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ.
ರಾಷ್ಟ್ರಪತಿಯವರು ಆಗಮಿಸುತ್ತಿರುವ ಹಿನ್ನೆಲೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದ್ದು, ಯಾವುದೇ ಅಹಿತರಕ ಘಟನೆಗಳುನಡೆಯದಂತೆ ಭಧ್ರತೆಯ ಹಿನ್ನೆಲೆಯಲ್ಲಿ ಪೊಲೀಸರು ಅನುಮತಿಯನ್ನು ನಿರಾಕರಣೆ ಮಾಡಿದ್ದಾರೆ.
ಸದ್ಯ ಮಹಿಷ ಪ್ರತಿಮೆಯ ಸುತ್ತಲು ಪೊಲೀಸರು ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.ಮಹಿಷ ಪ್ರತಿಮೆಗೆ ಮಾಡಬಹುದೆಂದು ಮುಂಜಾಗ್ರತವಾಗಿ ಪ್ರತಿಮೆಯ ಸುತ್ತಲೂ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ.
ಇದರ ಜೊತೆಗೆ ಬೆಟ್ಟಕ್ಕೆ ತೆರಳುವ ವಾಹನಗಳನ್ನು ತೆರಳುವ ಮುಂಚೆಯೇ ಸಂಪೂರ್ಣ ತಪಾಷಣೆ ಮಾಡಿ ಆನಂತರ ಒಳ ಬಿಡಲಾಗುತ್ತಿದೆ.





