Mysore
21
broken clouds

Social Media

ಸೋಮವಾರ, 15 ಜೂನ್ 2026
Light
Dark

ನಾಳೆ ಚಾಮುಂಡಿಬೆಟ್ಟದ ಏಕಶಿಲಾ ನಂದಿಗೆ ಮಹಾಭಿಷೇಕ

ಮೈಸೂರು: ನಾಳೆ(ಡಿ.೩) ರಂದು ಬೆಟ್ಟದ ಬಳಗ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಚಾಮುಂಡಿ ಬೆಟ್ಟದ ನಂದಿಗೆ 18ನೇ ವರ್ಷದ ಮಹಾಭಿಷೇಕ ಆಯೋಜನೆ ಮಾಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಲ್ಲಿ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ಎನ್‌.ಗೋವಿಂದ, ಬೆಳಗ್ಗೆ ನಡೆಯಲಿರುವ ಮಹಾಭಿಷೇಕದಲ್ಲಿ 32 ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೇ, ಆದಿಚುಂಚನಗಿರಿ ಮಠದ ಸೋಮನಾಥ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್‌.ಎಸ್..ಬನ್ನೂರಮಠ ಬಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಸುಮಾರು 5ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಬರುವ ಭಕ್ತರಿಗೂ ಪ್ರಸಾದ ವ್ಯವಸ್ತೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 2.5ಲಕ್ಷ ಕರ್ಚಾಗಲಿದ್ದು, ಟ್ರಸ್ಟ್‌ನೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಲು ಮುಂದಾಗಿರುವುದಾಗಿ ತಿಳಿಸಿದರು.

ಟ್ರಸ್ಟ್‌ ಅಧ್ಯಕ್ಷ ಪ್ರಕಾಶನ್‌, ಖಜಾಂಜಿ ಪ್ರಕಾಶ್‌, ಖಜಾಂಜಿ ಸುಂದರ್‌, ಅಭಿಷೇಕ ನಿರ್ವಹಣಾಧಿಕಾರಿ ಶಿವಕುಮಾರ್‌ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!