Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಮಡಿಕೇರಿ : ಫೆ.25 ರಂದು ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ

ಮಡಿಕೇರಿ: ಮೈಸೂರಿನ ರಂಗಾಯಣದ ವತಿಯಿಂದ ಫೆ.25ರಂದು ಶನಿವಾರ ಸಂಜೆ 6 ಗಂಟೆಗೆ ಕುಶಾಲನಗರದಲ್ಲಿ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶಿಸಲಾಗುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಕುಶಾಲನಗರದ ನೂತನ ಕಲಾಮಂದಿರದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಈ ನಾಟಕ ರಚಿಸಿ ನಿರ್ದೇಶಿಸಿದ್ದಾರೆ. ಹೆಸರಾಂತ ಕಲಾವಿದ ಶಶಿಧರ ಅಡಪ ರಂಗವಿನ್ಯಾಸ ಮಾಡಿದ್ದು, ಪ್ರಮೋದ್ ಶಿಗ್ಗಾಂವ್ ವಸ್ತ್ರ ವಿನ್ಯಾಸ, ಆರ್.ಸಿ.ಧನಂಜಯ, ಸುಬ್ರಹ್ಮಣ್ಯ ಸಂಗೀತವಿದೆ. 38 ಕಲಾವಿದರು ನಟಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯವ್ಯಾಪಿ ‘ಟಿಪ್ಪು ನಿಜ ಕನಸುಗಳು’ ನಾಟಕ ಅತ್ಯಂತ ಯಶಸ್ವಿಯಾಗಿದ್ದು, ನಾಟಕ ಪುಸ್ತಕ ಈಗಾಗಲೇ 25 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. 80  ಸಾವಿರ ಜನರಿಗೆ ಈ ಸಾಹಿತ್ಯ ತಲುಪಿದೆ. ಕುಶಾಲನಗರದಲ್ಲಿ ಶನಿವಾರ ‘ಟಿಪ್ಪು ನಿಜ ಕನಸುಗಳು’ ನಾಟಕದ 38ನೇ ಪ್ರದರ್ಶನ ಆಯೋಜಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಟಿಕೆಟ್‌ಗಾಗಿ ಮೊ.ಸಂ. 94830 94830 ಅನ್ನು ಸಂಪರ್ಕಿಸಬಹುದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ