Mysore
22
overcast clouds

Social Media

ಶುಕ್ರವಾರ, 19 ಜೂನ್ 2026
Light
Dark

ವರ್ತುಲ ರಸ್ತೆಗೆ ಬೆಳಕು : ಝಗಮಗಿಸಿದ ಎಲ್‌ಇಡಿ ವಿದ್ಯುತ್ ದೀಪಗಳು

ಪ್ರತಿ 2 ಕಿ.ಮೀ.ಗೆ ಸಿಸಿ ಕ್ಯಾಮೆರಾ ಅಳವಡಿಕೆ ಚಿಂತನೆ

ಮೈಸೂರು: ತಿಂಗಳುಗಳಿಂದ ಕಗ್ಗತ್ತಲಿನಲ್ಲಿದ್ದ ನಗರದ ವರ್ತುಲ ರಸ್ತೆಯಲ್ಲಿನ ಬೀದಿ ದೀಪಗಳ ಸಮಸ್ಯೆ ಬಗೆಹರಿದಿದ್ದು, ಗುರುವಾರ ರಾತ್ರಿಯಿಂದಲೇ ಎಲ್‌ಇಡಿ ಬೆಳಕು ಪ್ರಜ್ವಲಿಸಿತು.

ಕಳೆದ ಹಲವಾರು ವರ್ಷಗಳಿಂದ ವರ್ತುಲ ರಸ್ತೆಯಲ್ಲಿ ವಿದ್ಯುತ್ ದೀಪಗಳು ಇರಲಿಲ್ಲ. ಇದರಿಂದ ಪ್ರಾಂಣಿಕರಿಗೆ ಹಾಗೂ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಜತೆಗೆ ಅಪರಾಧ ಕೃತ್ಯಗಳು ನಡೆಯುತ್ತಿದ್ದವು. ವಿದ್ಯುತ್ ದೀಪಗಳ ಅಳವಡಿಕೆಯಿಂದ ಇದಕ್ಕೆಲ್ಲಾ ಕಡಿವಾಣ ಬಿದ್ದಿದೆ.

ಈ ಹಿಂದೆ ವಿದ್ಯುತ್ ದೀಪದ ಬಿಲ್ ಕೂಡ 1.19 ಕೋಟಿ ಸೆಸ್ಕ್‌ಗೆ ಬಾಕಿ ಇತ್ತು. ಇದರಿಂದ ಕೂಡ ಬೀದಿ ದೀಪಗಳನ್ನು ಬೆಳಗಿಸಲು ಸಾಧ್ಯವಾಗಿರಲಿಲ್ಲ. ಅದರಂತೆ ಸೆಸ್ಕ್‌ಗೆ ಪಾವತಿಸಬೇಕಿದ್ದ 1.19 ಕೋಟಿ ರೂ.ಗಳನ್ನು ಮುಡಾ ವತಿಯಿಂದ ನೀಡಲಾಗಿದೆ. ಬೀದಿ ದೀಪಗಳ ನಿರ್ವಹಣೆಗೆ ಒಂದು ವರ್ಷದವರೆಗೆ ಗುತ್ತಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿ ಹಾಗೂ ನಿರ್ವಹಣೆಯನ್ನು ನಗರಪಾಲಿಕೆ ಮಾಡಲಿದೆ.

ಈ ಹಿಂದೆ ವರ್ತುಲ ರಸ್ತೆಯ ಸುತ್ತಾ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಕೇಬಲ್, ಕಂಬ, ಬಲ್ಬ್ ಗಳ ಕಳವು ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ವರ್ತುಲ ರಸ್ತೆುಂ ಪ್ರತಿ 2 ಕಿ.ಮೀ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಲಾಗಿದೆ.

ಎಲ್‌ಇಡಿ ದೀಪಗಳ ಅಳವಡಿಕೆಗೆ ಕಳೆದ ಕೆಲವು ತಿಂಗಳಿನಿಂದ ಸಂಸದ ಪ್ರತಾಪ್ ಸಿಂಹ ಯೋಜನೆ ರೂಪಿಸಿದ್ದರು. ಡಿಸೆಂಬರ್ ಒಳಗೆ ವಿದ್ಯುತ್ ದೀಪ ಅಳವಡಿಸುವ ಭರವಸೆಯನ್ನೂ ನೀಡಿದ್ದರು. ಅದರಂತೆ ಗುರುವಾರ (ಡಿ.1) ರಾತ್ರಿ ನೂತನ ವ್ಯವಸ್ಥೆಗೆ ಪ್ರತಾಪ್ ಸಿಂಹ ಚಾಲನೆ ನೀಡಿದರು.

12 ಕೋಟಿ ರೂ. ವೆಚ್ಚ

45 ಕಿ.ಮೀ. ಸುತ್ತಳತೆ

86 ಕಿ.ಮೀ. ಕೇಬಲ್

4,556ಎಲ್‌ಇಡಿ ಬಲ್ಬ್

20 ಹೈಮಾಸ್ಟ್ ದೀಪ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!