Mysore
22
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಮೈಸೂರು – ಮಾನಂದವಾಡಿ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ

ಕಂಚಮಲ್ಲಿ ಗೇಟ್ ಸ್ವಾಗತ ಕಮಾನು ಸಮೀಪ ತಡರಾತ್ರಿ ಚಿರತೆ ಪತ್ತೆ

ಮೈಸೂರು: ಜಿಲ್ಲೆಯಾದ್ಯಂತ ಮೂಲೆ ಮೂಲೆಯಲ್ಲೂ ಚಿರತೆ ಪ್ರತ್ಯೇಕ್ಷವಾಗುತ್ತಿದ್ದು, ಇದೀಗ ಮೈಸೂರು ಮಾನಂದವಾಡಿ ರಸ್ತೆಯ ಕಂಚಮಳ್ಳಿ ಗೇಟ್ ಸಮೀಪ ಇರುವ ಸ್ವಾಗತ ಕಮಾನು ಬಳಿ ಚಿರತೆ ಕಾಣಿಸಿಕೊಂಡಿದ್ದು ಅಲ್ಲಿನ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಶನಿವಾರ ರಾತ್ರಿ 1ಗಂಟೆ 15 ನಿಮಿಷಕ್ಕೆ ಚಿರತೆ ಕಾಣಿಸಿಕೊಂಡಿದೆ. ಹಂಪಾಪುರದ ಗ್ರಾಮಸ್ಥರೊಬ್ಬರು ರಾತ್ರಿ ತಮ್ಮ ಕೆಲಸ ಮುಗಿಸಿ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಚಿರತೆಯೊಂದು ಹೋಗುತ್ತಿದ್ದನ್ನು ನೋಡಿದ್ದಾರೆ. ನಾಯಿಯೊಂದು ರಸ್ತೆ ದಾಟುತ್ತಿದೆ ಎಂದು ಸಮೀಪ ಹೋಗುತ್ತಿದ್ದಾಗ ಹಾಗೆ ಚಿರತೆ ಬೈಕ್ ಹಾರನ್ ಶಬ್ಧಕ್ಕೆ ಓಡಿಹೋಯಿತು ಎಂದು ಹೇಳಿದ್ದಾರೆ‌.

ಈ ಹಿಂದೆಯು ಹಂಪಾಪುರ ಗ್ರಾಮದಲ್ಲಿ ಮನೆ ಹಿಂಭಾಗ ಚಿರತೆ ಬಂದು ಹೋಗಿದ್ದ ಗುರುತು ಸಿಕ್ಕಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಚಿರತೆ ಭಯದಿಂದ ಸ್ಥಳೀಯ ನಿವಾಸಿಗಳು, ಬಹುತೇಕ ರೈತರು ತಮ್ಮ ಜಮೀನಿನಲ್ಲಿ ಉಳಿದುಕೊಳ್ಳಲು ಹಾಗೂ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ.
ಇಲಾಖೆಯವರು ಚಿರತೆಯನ್ನು ಹಿಡಿದು ಅರಣ್ಯಕ್ಕೆ ಸ್ಥಳಾಂತರಿಸಬೇಕು ಎಂಬುದು ಆಗ್ರಹಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!