ಕುಂದಕೆರೆ ಜಮೀನಿನಲ್ಲಿ ಚಿರತೆ ಸೆರೆ ಗುಂಡ್ಲುಪೇಟೆ: ತಾಲ್ಲೂಕಿನ ಕುಂದಕೆರೆ ಗ್ರಾಮದ ಒಳಗೆ ನುಗ್ಗಿ ಕುರಿಗಳ ಮೇಲೆ ಈ ಹಿಂದೆ ಚಿರತೆ ದಾಳಿ ನಡೆಸಿ ಕುರಿಗಳನ್ನು ಕೊಂದುಹಾಕಿತ್ತು, ಹೊರವಲಯದ ಜಮೀನಿನಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ದಿನದಿಂದ ಕುಂದಕೆರೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಲಾಗಿತ್ತು. ಚಿರತೆ ಮಂಗಳವಾರ ರಾತ್ರಿ ಕುಂದಕೆರೆ ಗ್ರಾಮದ ವಿನೋದ್ ಎಂಬುವವರ ಜಮೀನಿನ ಸಮೀಪ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ. Tags: ಕುಂದಕೆರೆಗುಂಡ್ಲುಪೇಟೆಚಾಮರಾಜನಗರಚಿರತೆ ದಾಳಿ
ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ September 13, 8:20 AM Byಆಂದೋಲನ ಡೆಸ್ಕ್