Mysore
28
moderate rain

Social Media

ಶನಿವಾರ, 13 ಜೂನ್ 2026
Light
Dark

ಕೊರಟಗೆರೆ : ಚಿರತೆ ದಾಳಿಯಿಂದ ಬಾಲಕರಿಗೆ ಗಾಯ: ಆಂಬ್ಯುಲೆನ್ಸ್ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ

ತುಮಕೂರು: ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲನಿಯಲ್ಲಿ ಶನಿವಾರ

ಬೆಳಗ್ಗೆ ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ ನಡೆಸಿದ್ದು ಇಬ್ಬರಿಗೂ ಗಾಯಗಳಾಗಿವೆ.

ಕೊಳ್ಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಕೆಂಪರಾಜು ಆವರ ಮಕ್ಕಳಾದ ಧನುಷ್ (13) ಈ ಹಾಗೂ ಚೇತನ್ ಕೆ (15 ಚಿರತೆ ದಾಳಿಗೆ ಒಳಗಾದವರು.

ಇಬ್ಬರು ಬಾಲಕರು ಕೊಟ್ಟಿಗೆಗೆ ದನದ ಹಾಲು ಕರೆಯಲು ಹೋಗಿದ್ದರು. ಈ ವೇಳೆ ಕೊಟ್ಠಿಗೆಯಲ್ಲೇ ಅವಿತಿದ್ದ
ಚಿರತೆ ದಾಳಿ ಮಾಡಿದೆ. ಇದರಿಂದ ಭಯಗೊಂಡ ಮಕ್ಕಳು ಕಿರುಚಾಡಿದ್ದಾರೆ. ಮಕ್ಕಳ ಅರುಚಾಟಕ್ಕೆ ಬೆದರಿದ ಚಿರತೆ ಓಡಿ ಹೋಗಿದೆ.
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು
ಅವರ ತಂದೆ ಕೆಂಪರಾಜು ಅವರು 108 ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಆದರೆ ಸಿಬ್ಬಂದಿ ನಮ್ಮಲ್ಲಿ ಅಂಬುಲೆನ್ಸ್ ಇಲ್ಲ ತುಮಕೂರಿಗೆ ಕರೆ ಮಾಡಿ ಎಂದು ನಿರ್ಲಕ್ಷ್ಯದ ಉತ್ತರ ನೀಡಿದರು ಎಂಬ ದೂರು ಕೇಳಿ ಬಂದಿದೆ.
ಗಾಯಾಳು ಬಾಲಕರನ್ನ ಖಾಸಗಿ ಕಾರಿನಲ್ಲೇ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕರೆದೊಯ್ಯುವಾಗ
ಕೊರಟಗೆರೆ ಆಸ್ಪತ್ರೆ ಆವರಣದಲ್ಲಿ ಎರಡು ಅಂಬುಲೆನ್ಸ್ ಗಳು ನಿಂತಿದ್ದನ್ನು ಕೆಂಪರಾಜು ಗಮನಿಸಿದ್ದಾರೆ.
ಈ ವೇಳೆ ಅಧಿಕಾರಿಗಳ ವಿರುದ್ದ ಕೆಂಪರಾಜು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಅಧಿಕಾರಿಗಳು ಸಮಜಾಯಿಷಿ ನೀಡಿ ಸಮಾಧಾನಗೊಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!