ಹನೂರು : ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ನೋಡಲ್ ಅಧಿಕಾರಿ ಚುಂಚಯ್ಯ ತಿಳಿಸಿದರು.
ತಾಲೂಕಿನ ಒಡೆಯರ್ ಪಾಳ್ಯ ಕ್ಲಸ್ಟರ್ ನ ಒಡೆಯರ ಪಾಳ್ಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹಿಂದುಳಿದರೆ ತಮ್ಮ ಜೀವನದ ಉದ್ದಕ್ಕೂ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ವಿದ್ಯಾಭ್ಯಾಸಕಷ್ಟೇ ಮೀಸಲಿರಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮವು ಮುಖ್ಯ ರಸ್ತೆಯಲ್ಲಿ ಸಾಗಿ ಕುಣಿದು ಸಂಭ್ರಮಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿಯರು ಆರತಿ ಬೆಳಗಿ ಬರಮಾಡಿಕೊಂಡರೇ, ವಿದ್ಯಾರ್ಥಿಗಳು ತಮ್ಮ ಶಿಕ್ಷಕರುಗಳನ್ನು ಎತ್ತಿನ ಗಾಡಿಯಲ್ಲಿ ಕರೆತರುವ ಮೂಲಕ ವಿಶಿಷ್ಟವಾಗಿ ಬರಮಾಡಿಕೊಂಡರು.ಕಲಿಕಾ ಹಬ್ಬದಲ್ಲಿ ಆಕರ್ಷಣೆಯ ಬಿಂದುವಾಗಿದ್ದ ಏರುವ ಹಲ್ಲಿ ಗುರುತ್ವಾಕರ್ಷಣೆ ಹಾಗೂ ನೋರೆ ಹಾವು, ತಂತಿಯ ಸುರುಳಿ ಹಾವು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಹುತ್ತೂರು ಗ್ರಾಮದ ಅಧ್ಯಕ್ಷೆ ಗಿರಿಜಾ ಶೇಖರ್, ಉಪಾಧ್ಯಕ್ಷ ಪುಷ್ಪಲತಾ ಬಸವರಾಜ್, ಸದಸ್ಯರುಗಳಾದ ಮಹೇಶ್ ಪಾಪತಿ, ಮಂಗಳಮ್ಮ, ಇಸಿಓ ಚಿನ್ನಪ್ಪಯ್ಯ, ಸಿ ಆರ್ ಪಿ ನಟೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ವಿ, ಮುಖ್ಯ ಶಿಕ್ಷಕರುಗಳಾದ ನಾಗೇಶ್, ಮಾದೇಶ್, ಜಯ ಪ್ರಕಾಶ್,ಮಹದೇವಸ್ವಾಮಿ, ಬಾಬು,ಎಸ್ ಡಿ ಎಮ್ ಸಿ ಅಧ್ಯಕ್ಷ ಮಹದೇವ ಪ್ರಭು, ಸಂಪನ್ಮೂಲ ವ್ಯಕ್ತಿ ಬೈಲೂರು ಪ್ರೌಢಶಾಲೆಯ ಮೋಹನ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕ ಚಂದ್ರಶೇಖರ್ ಹುತ್ತೂರು ಹಾಗೂ ಬೈಲೂರು ಗ್ರಾಪಂ ಸದಸ್ಯರುಗಳು ಹಾಗೂ ಎಲ್ಲಾ ಶಾಲೆಯ ಶಿಕ್ಷಕರುಗಳು ಭಾಗವಹಿಸಿದ್ದರು.