Mysore
34
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಆ.12 ರಂದು ಕುಳುವ ನುಲಿಯ ಚಂದಯ್ಯ ಜಯಂತಿ ಆಚರಣೆಗೆ ನಿರ್ಧಾರ

ಮೈಸೂರು :  ರಾಜ್ಯಾದ್ಯಾಂತ ಕಾಯಕಯೋಗಿ ಶ್ರೀ ಕುಳುವ ನುಲಿಯ ಚಂದಯ್ಯ ಅವರ ಜಯಂತಿಯನ್ನು ಜಿಲ್ಲಾಡಳಿತ ಮೈಸೂರು ಆಚರಣೆ ಹಿನ್ನೆಲೆಯಲ್ಲಿ ನಗರ ಜಲದರ್ಶಿನಿ ಪ್ರವಾಸಿಮಂದಿರಲ್ಲಿ ಕುಳುವ ಸಮಾಜದ ವಿವಿಧ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮುದಾಯದ ಪ್ರಜ್ಞಾವಂತರ ಸಭೆಯನ್ನು ನಿವೃತ್ತ ಜಿಲ್ಲಾಧಿಕಾರಿ ಎಸ್.ಟಿ ಅಂಜನ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜಯಂತಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.ಸಭೆಗೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ರಿ) ರಾಜ್ಯದ ಜಂಟಿ‌ ಕಾರ್ಯದರ್ಶಿ ಶ್ರೀ ಕಿರಣ್ ಕುಮಾರ್ ಕೊತ್ತಗೆರೆ ಮಾತನಾಡಿ ಚಂದಯ್ಯನವರ ಜಯಂತಿಯ‌ ಆಚರಣೆಗೆ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿರವರಿಗೆ ಇಡೀ ಜನಾಂಗದ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸಲಾಯಿತು.

ಮುಂದುವರೆದು ಕುಳುವ ಸಮಾಜದ ಏಕೈಕ ಧಾರ್ಮಿಕ‌ ಅಸ್ಮಿತೆಯಾದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾದ್ಯಾಂತ ಅತ್ಯಂತ ವಿಜೃಂಭಣೆಯಿಂದು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲೆಯ ಎಲ್ಲ ಕುಳುವರು ಭಾಗವಹಿಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಅಂಜನ್ ಕುಮಾರ್ ಮನವಿ ಮಾಡಿದರು. ಜಲದರ್ಶಿನಿ ಅತಿಥಿ ಗೃಹದಲ್ಲಿ ಸಮುದಾಯದ ಜಿಲ್ಲಾ,ತಾಲ್ಲೂಕು AKMS ಸಂಘಟನೆಯ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ,

ಎಕೆಎಂಎಸ್‌ ರಾಜ್ಯ ಸಂಘಟನೆಯ ನಿರಂತರ ಹೋರಾಟದ ಪ್ರಯತ್ನದ ಫಲವಾಗಿ ಇಂದು ಕುಳುವ ಸಮುದಾಯದ
12 ಶತಮಾನದ ದಾರ್ಶನಿಕ ಮಹಾಪುರುಷ ಶ್ರೀ ನುಲಿಯ ಚಂದಯ್ಯ ಅವರ ಜಯಂತಿ ಆಚರಣೆಯನ್ನು ಆ.12 ರಂದು ಜಿಲ್ಲಾಡಳಿತ ಆಚರಿಸಲು ನಿರ್ಧರಿಸಿದ್ದು. ಎಲ್ಲರೂ ಒಟ್ಟಾಗಿ ಸೇರಿ ಕಾರ್ಯಕ್ರಮ ಯಶಸ್ವಿಯಾಗಿಸಲು ಸಹಕರಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ತಿರುಮಲಾಪುರ ಕೆ.ಗೋಪಾಲ್ ಮಾತನಾಡಿ ಎಲ್ಲ ಶರಣರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜಯಂತಿಯ ಮಾದರಿಯಲ್ಲಿ ಜಿಲ್ಲಾಡಳಿತ ಚಂದಯ್ಯನವರ ಜಯಂತಿಯನ್ನು ಆಚರಣೆ ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು. ಸಭೆಯಲ್ಲಿ AKMS ರಾಜ್ಯ ಉಪಾಧ್ಯಕ್ಷರಾದ ವೆಂಕಟಾಚಲ, SC & ST ಅಲೆಮಾರಿ ಅಭಿವೃದ್ದಿ ಅನುಷ್ಠಾನ ಸಮಿತಿ‌ ಸದಸ್ಯರಾದ ನಾಗರಾಜು ಕೋಟೆ, ಮುತ್ತುರಾಜು ಪಿರಿಯಾಪಟ್ಟಣ,ರುಕ್ಮಾಗದ ತೊಂಡಾಳು,ಲೋಕೇಶ್ ಮುಧುವನಹಳ್ಳಿ,ಹೆಚ್ ಡಿ ಕೋಟೆ ತಾಲ್ಲೂಕು ಅಧ್ಯಕ್ಷ ಬಿ.ಜಿ ಮಹೇಂದ್ರ, ಟಿ ನರಸೀಪುರ ಅಧ್ಯಕ್ಷ ರವಿಕುಮಾರ್. ಮೈಸೂರು ನಗರ ಅಧ್ಯಕ್ಷ ಬಾಲರಾಜು, ಮತ್ತಿತರರು.ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ