ಕೊಳ್ಳೇಗಾಲ: ವಿಗ್ರಹಚೋರರಿಂದ ಅಪಹರಿಸಲ್ಪಟ್ಟಿದ್ದ ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ದೊಡ್ಡ ಆಲದಮರದ ಕೆಳಗೆ ಪ್ರತಿಷ್ಠಾಪಿಸಿದ್ದ ಕಲ್ಲು ವಿಗ್ರಹವನ್ನು ಅರ್ಚಕರು ಪತ್ತೆ ಮಾಡಿ ಮರು ಪ್ರತಿಷ್ಠಾಪಿಸಿದ್ದಾರೆ.
ವಿಗ್ರಹಚೋರರು ಪ್ರತಿಷ್ಠಾಪನ ಸ್ಥಳದಿಂದ ವಿಗ್ರಹವನ್ನು ಬೇರ್ಪಡಿಸಿ ಕೊಂಡೊಯ್ದು ರ್ಯಾಪಿಡ್ ಫ್ಯಾಕ್ಟರಿ ಮುಂಭಾಗದಲ್ಲಿರುವ ಪೊದೆಯಲ್ಲಿಟ್ಟು ಹೋಗಿದ್ದರು. ಬೆಳಗಿನ ಜಾವ ಕೆಲ ಆಟೋ ಚಾಲಕರು ಮತ್ತು ಅರ್ಚಕರು ಎರಡು ವಿಗ್ರಹದಲ್ಲಿ ಒಂದು ವಿಗ್ರಹ ನಾಪತ್ತೆಯಾಗಿದ್ದನ್ನು ಗಮನಿಸಿ ಹುಡುಕಾಟ ನಡೆಸಿದರು.
ಕೊನೆಗೆ ನಾಪತ್ತೆಯಾಗಿದ್ದ ವಿಗ್ರಹವನ್ನು ಪತ್ತೆ ಮಾಡಿ ಮತ್ತೇ ಅದೇ ಸ್ಥಳದಲ್ಲಿ ಶಿವನಸಮುದ್ರ ಅರ್ಚಕ ಶ್ರೀಧರ್ ಅವರಿಂದ ಮರು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.





