Mysore
24
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ವಿರಾಜಪೇಟೆಯಲ್ಲಿ ಯದುವೀರ್‌ ರೋಡ್‌ ಶೋ: ರಾಜರಿಗೆ ನಟಿ ತಾರಾ ಸಾಥ್‌!

ಕೊಡಗು/ವಿರಾಜಪೇಟೆ: ನಗರ ಬಿಜೆಪಿ ವತಿಯಿಂದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಾಯಿತು.

ಬೆಳಿಗ್ಗೆ ಪಟ್ಟಣದ ತೆಲುಗರ ಬೀದಿಯ ಮಾರಿಯಮ್ಮ ಗುಡಿಯಿಂದ ವಿರಾಜಪೇಟೆಯ ಗಡಿಯಾರ ಕಂಬದ ಮೂಲಕ ಖಾಸಗಿ ಬಸ್ ನಿಲ್ದಾಣಕ್ಕಾಗಿ ಗೋಣಿಕೊಪ್ಪ ಮುಖ್ಯ ರಸ್ತೆಗಳಲ್ಲಿ ರೋಡ್ ಶೋ ಮತ್ತು ಮತಯಾಚನೆ ನಡೆಸಲಾಯಿತು. ಈ ಸಂದರ್ಭ ಮಹಿಳಾ ತಂಡದಿಂದ ಚಂಡೆ ವಾದ್ಯ ಗಮನಸೆಳೆಯಿತು.

ರೋಡ್ ಶೋನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್, ಚಲನಚಿತ್ರ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ತಾರಾ, ಕೊಡಗು ಮೈಸೂರು ಕ್ಷೇತ್ರದ ಚುನಾವಣಾ ಉಸ್ತುವಾರಿ ಪಳೆಯಂಡ ರಾಬೀನ್ ದೇವಯ್ಯ, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಇತರರು ಉಪಸ್ಥಿತರಿದ್ದರು.

Tags:
error: Content is protected !!