Mysore
25
clear sky

Social Media

ಸೋಮವಾರ, 07 ಏಪ್ರಿಲ 2025
Light
Dark

ಮಡಿಕೇರಿಯಲ್ಲಿ ಸಂಸದ ಯದುವೀರ್‌ ಜನ ಸಂಪರ್ಕ ಯಾತ್ರೆ

ಮಡಿಕೇರಿ: ಜಿಲ್ಲೆಯ ಕುಟ್ಟ ನಾಗರಹೊಳೆ ಗೇಟ್ ಸಮೀಪದ ಬಾಳೆಕಾವು ಹಾಡಿಗೆ ಭೇಟಿ ನೀಡಿದ ಮೈಸೂರು – ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅಲ್ಲಿನ‌ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಹಾಡಿಯ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಂಸದರಿಗೆ ಮನವಿಯನ್ನು ಮಾಡಿಕೊಂಡರು. ಬಲ್ಯಮೊಂಡೂರು ಗ್ರಾಮದ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಪಾಲ್ಗೊಂಡ ನಂತರ ಯದುವೀರ್‌ ಚಿಕ್ಕಮೊಂಡೂರು ದವಸ ಭಂಡಾರಕ್ಕೆ ಭೇಟಿ ನೀಡಿ ಅಲ್ಲಿನ ಸದಸ್ಯರೊಂದಿಗೆ ಸಭೆ ನಡೆಸಿದರು.

ನಂತರ ಬಾಳೆಲೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ವಿಕಸಿತ ಭಾರತದ ಕನಸನ್ನು ನನಸು ಮಾಡಲು ಎಲ್ಲರೂ ಪಕ್ಷದಲ್ಲಿ ಜವಾಬ್ದಾರಿಯುತವಾಗಿ ಮುಂದುವರೆಯಬೇಕೆಂದು ಮನವಿ ಮಾಡಿದರು.
ಅಂತಿಮವಾಗಿ ಮಾಯಮುಡಿ ಗ್ರಾಮ ಪಂಚಾಯತಿ ಸಭಾಂಗಣದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಬಲಿಷ್ಟ ಭಾರತದ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರು ಮುಕ್ತವಾಗಿ ಮೈಸೂರು ಕಚೇರಿಗೆ ಭೇಟಿ‌ ನೀಡಬಹುದು, ಸಂಸದರ ಕಚೇರಿ ಜನಸೇವೆಗೆ ಸದಾ ಸಿದ್ದ ಎಂದು ತಿಳಿಸಿದರು.

Tags: