ವಿರಾಜಪೇಟೆ : ಶ್ರೀಮಂಗಲ ವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ವಿಫಲವಾದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ವರ್ಗಾಹಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂಗುತ್ತಿಗೆ ಹೋರಾಟ ಸಮಿತಿಯ ಸಂಚಾಲಕ ಮತ್ತು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ಕೃಷ್ಣಪ್ಪ, ಶ್ರೀಮಂಗಲ ವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಲಿತರ, ಪರಿಶಿಷ್ಟ ವರ್ಗದವರಿಗೆ ರಕ್ಷಣೆ ಹಾಗೂ ಸೂಕ್ತ ನ್ಯಾಯ ಒದಗಿಸದೆ ಉಡಾಪೆಯಿಂದ ನಡೆದುಕೊಳ್ಳುತ್ತಿರುವ ಶ್ರೀಮಂಗಲ ಠಾಣಾಧಿಕಾರಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರನ್ನು ತಕ್ಷಣ ವಗಾಹಿಸುವಂತೆ ಆಗ್ರಹಿಸಿದರು.
ಜು.೧೫ ರಂದು ಪರಿಶಿಷ್ಠ ಪಂಗಡದ ಮಣಿ ಎಂಬಾತ ತನ್ನ ಮೇಲೆ ನಡೆದ ಹಲ್ಲೆ ಕುರಿತು ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜು.೧೬ರಂದು ಠಾಣಾಽಕಾರಿ ಇವರನ್ನು ಕರೆಯಿತಿ ತಾವು ಹೇಳಿದಂತೆ ಹೇಳಿಕೆ ನೀಡುವಂತೆ ಒತ್ತಾಯಿಸಿ ಹೇಳಿಕೆ ಪಡೆದು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ರೀತಿಯ ಪ್ರಕರಣ ಇಲ್ಲಿ ಹೆಚ್ಚಾಗಿದೆ ಎಂದು ದೂರಿದರು.
ಇತ್ತಿಚೆಗೆ ನಮ್ಮ ಸಮಿತಿಯ ಕಾರ್ಯಕರ್ತರು ಶ್ರೀಮಂಗಲ ಠಾಣೆಗೆ ಹೋದಾಗ ಅಲ್ಲಿದ್ದ ಆ ಭಾಗದ ಪೊಲೀಸ್ ವೃತ್ತ ನಿರೀಕ್ಷಕರು ಬಾಯಿಗೆ ಬಂದಂತೆ ಮಾತನಾಡಿ, ನಾನು ಈ ಭಾಗಕ್ಕೆ ಬಂದಿರುವುದೆ ನಿಮ್ಮಂತ ಸಂಘಟನೆ ಮಟ್ಟ ಹಾಕಲು ಎಂಬ ಮಾತನಾಡಿದ್ದು ಸರಿಯಲ್ಲ. ಈ ಇಬ್ಬರು ಅಽಕಾರಿಗಳೂ ವಿರಾಜಪೇಟೆ ಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಇಲ್ಲಿಗೆ ಬಂದವರು. ಇವರಿಬ್ಬರ ವರ್ಗಕ್ಕೆ ಶಾಸಕರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ದಲಿತ ರೈಟ್ಸ್ ಮೂಮೆಂಟ್ಸ್‌ನ ರಾಜ್ಯ ಉಪಾಧ್ಯಕ್ಷ ರಮೇಶ್ ಮಾಯಮುಡಿ ಮಾತನಾಡಿ, ಪೊಲೀಸ್ ವೃತ್ತ ನಿರೀಕ್ಷಕರಿಗೆ ದಲಿತ ಸಂಘರ್ಷ ಸಮಿತಿ ಮಟ್ಟ ಹಾಕುವ ಕೆಲಸ ಬೇಡ. ಅವರು ದಲಿತರಿಗೆ, ಪರಿಶಿಷ್ಟ ವರ್ಗದ ಜನರಿಗೆ ರಕ್ಷಣೆ ಹಾಗೂ ನ್ಯಾಯ ಒದಗಿಸುವ ಕರ್ತವ್ಯ ಮಾಡಲಿ. ಇದೇ ರೀತಿ ಧೋರಣೆ ತೋರಿದರೆ ಉಗ್ರ ಹೋರಾಟ ಅನಿವಾರ್ಯ. ಇವರನ್ನು ತಕ್ಷಣ ಶಾಸಕರು ಇಲ್ಲಿಂದ ವರ್ಗಹಿಸಬೇಕಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಜನಿಕಾಂತ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ಎ ಮಹದೇವ, ದಲಿತ ಸಂಘರ್ಷ ಸಮಿತಿಯ ಮುಖಂಡ ಹೆಚ್.ಬಿ. ಸತೀಶ್, ಜಿಲ್ಲಾ ಸಂಘಟನಾ ಸಂಚಾಲಕ ಶಿವಣ್ಣ, ನಾಗೇಶ್, ದಲಿತ ಮುಖಂಡ ಶಿವಕುಮಾರ್ ಉಪಸ್ಥಿತರಿದ್ದರು.





