ಮಡಿಕೇರಿ: ವಿರಾಜಪೇಟೆ ಸನಿಹದ ಮಗ್ಗುಲ ಗ್ರಾಮದಲ್ಲಿ ಆನೆ ದಾಳಿ ಮುಂದುವರಿದಿದ್ದು, ಇಂದು ಬೆಳಿಗ್ಗೆ ಸಹ ತೋಟಕ್ಕೆ ಲಗ್ಗೆಯಿಟ್ಟ ಆನೆ ಹಿಂಡುಗಳು ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿವೆ.
ಇಂದು ಬೆಳಗ್ಗಿನ ಜಾವ ಕಾಡಾನೆಗಳ ಗುಂಪು ಮಗ್ಗುಲ ಗ್ರಾಮದ ಪ್ರಗತಿಪರ ಕೃಷಿಕ ಪುಲಿಯಂಡ ಜಗದೀಶ್ ರವರ ತೋಟಕ್ಕೆ ಲಗ್ಗೆ ಇಟ್ಟು ಅಡಿಕೆ ಮತ್ತು ಬಾಳೆ ಗಿಡಗಳನ್ನು ನಾಶ ಪಡಿಸಿವೆ.
ಪ್ರಸ್ತುತ ಕಾಫಿ ಕುಯ್ಲಿನ ಸಮಯವಾಗಿದ್ದು ಆನೆ ಧಾಳಿಯ ಪರಿಣಾಮ ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ಕಾರ್ಮಿಕರು ಕೆಲಸ ಮಾಡಲು ನಕಾರ ಸೂಚುಸುತ್ತಿದ್ದು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





