Mysore
29
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಗೋಣಿಕೊಪ್ಪದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಗೋಣಿಕೊಪ್ಪ: ಪಟ್ಟಣದಲ್ಲಿ ಇಂದು ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.

ಧಾರಾಕಾರ ಮಳೆಗೆ ಶಾಲಾ-ಕಾಲೇಜುಗಳ ಮೈದಾನಗಳು ಕೆರೆಯಂತಾಗಿದ್ದು, ಮಕ್ಕಳು ಮನೆಗೆ ಹೋಗಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭಾರೀ ಮಳೆಯಿಂದ ರಸ್ತೆ ಬದಿಯ ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲಾ ನೀರು ನಿಂತಿತು.

ಇನ್ನು ಧಾರಾಕಾರ ಮಳೆಯಿಂದ ಗೋಣಿಕೊಪ್ಪಲಿನಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು, ಜನರು ಕತ್ತಲಿನಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

 

 

Tags:
error: Content is protected !!