Mysore
27
overcast clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಪೊನ್ನಂಪೇಟೆ | ಮತ್ತೆ ವ್ಯಾಘ್ರ ದರ್ಶನ ; ಗ್ರಾಮಸ್ಥರಲ್ಲಿ ಆತಂಕ

ಪೊನ್ನಂಪೇಟೆ : ಇಲ್ಲಿನ ಸುತ್ತಮುತ್ತಾ ಹುಲಿ ಸಂಚಾರ ಮತ್ತೆ ಶುರುವಾಗಿದೆ. ಕಳೆದೊಂದು ವಾರದಿಂದ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಹುಲಿ ಸಂಚಾರ ಆತಂಕ ಮೂಡಿಸಿದೆ.

ನಿನ್ನೆ ರಾತ್ರಿ ಪೊನ್ನಂಪೇಟೆ ಸಮೀಪದ ಬಾಳೆಲೆ ರಸ್ತೆಯ ಕಿರುಗೂರು ಗ್ರಾಮದ ಕಾರಣಿ ಎಂಬಲ್ಲಿ ವಿ.ಎಲ್ ಚಂದ್ರಶೇಖರ್ ಅವರಿಗೆ ಸೇರಿದ ಹಸುವನ್ನು ಹುಲಿ ಓಡಿಸಿಕೊಂಡು ಹೋಗಿ ದಾಳಿ ನಡೆಸಿದೆ. ಆದರೆ ಹಸು ತಪ್ಪಿಸಿಕೊಂಡಿದೆ. ಹಸುವಿಗೆ ಗಾಯಗಳಾಗಿದ್ದು, ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಈ ಸ್ಥಳದ ಅನತಿ ದೂರದ ಚೀಪೆ ಕೊಲ್ಲಿ ಎಂಬಲ್ಲಿ ಹಸುವನ್ನು ಬೇಟಿಯಾಡಿ ಸ್ವಲ್ಪ ಭಾಗ ತಿಂದು ಹೋಗಿತ್ತು. ನಂತರ ಮರುದಿನ ಬೆಳಿಗ್ಗೆ ಸಮೀಪದ ಸಿ. ಕೆ ಉತ್ತಪ್ಪನವರ ತೋಟದಲ್ಲಿ ಕಾಣಿಸಿಕೊಂಡಿತು. ಇದೀಗ ಅದೇ ಪ್ರದೇಶದಲ್ಲಿ ಹುಲಿ ಸಂಚರಿಸುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

Tags:
error: Content is protected !!