ವಿರಾಜಪೇಟೆ: ವಿರಾಜಪೇಟೆ ಕಾವೇರಿ ಶಾಲೆ ಮುಂಭಾಗದಿಂದ ಕುಕ್ಲೂರು ಮುತ್ತಪ್ಪ ದೇವಸ್ಥಾನದ ವಿರಾಜಪೇಟೆ – ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕಳೆದ ತಡರಾತ್ರಿ ಹುಲಿ ನಡೆದುಕೊಂಡು ಹೋಗಿದ್ದು, ಈ ದೃಶ್ಯ ಕಾರು ಚಾಲಕನ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಸ್ಥಳದಲ್ಲಿ ಅದರ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪೂಮಾಲೆ ಮಂದ್ ಮೂಲಕ ವಿರಾಜಪೇಟೆ -ಮಡಿಕೇರಿ ರಸ್ತೆ ಬದಿಗೆ ತೆರಲಿರುವ ಶಂಕೆ ವ್ಯಕ್ತವಾಗಿದೆ.
ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಭಾರೀ ಆತಂಕ ವ್ಯಕ್ತಪಡಿಸಿದ್ದು, ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸ್ಥಳೀಯರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಸಮೀಪದ ಅರಣ್ಯಕ್ಕೆ ಹುಲಿಯನ್ನು ಸೇರಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.