Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಆನೆ ಮೂಲಕ ಹುಲಿ ಸೆರೆಗೆ ಭರ್ಜರಿ ಕಾರ್ಯಾಚರಣೆ

ಮಡಿಕೇರಿ: ಕಳೆದ ಎರಡು ದಿನಗಳಿಂದ ವೆಸ್ಟ್‌ ನೆಮ್ಮಲೆ, ಶೆಟ್ಟಿಗೇರಿ, ತಾವಳಗೇರಿ, ಶ್ರೀಮಂಗಲ ಮತ್ತು ಬೀರುಗ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಯೊಂದು ತನ್ನ ಉಪಟಳ ನೀಡುತ್ತಿದ್ದು, ರೈತರು ಸಾಕಿದ ಹಲವು ಸಾಕು ಪ್ರಾಣಿಗಳನ್ನು ತಿಂದು ತೇಗಿದೆ.

ಹುಲಿ ದಾಳಿಯಿಂದ ಭಯಭೀತರಾಗಿರುವ ಸುತ್ತಮತ್ತಲ ಗ್ರಾಮಸ್ಥರು, ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ರೈತರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿ ಚಲನವಲನ ಕಂಡು ಬಂದಿದ್ದ ಸ್ಥಳಗಳಲ್ಲಿ ಮೂರ್ನಾಲ್ಕು ಬೋನುಗಳನ್ನು ಅಳವಡಿಸಿದೆ.

ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್‌ ನೆಮ್ಮಲೆ ಗ್ರಾಮದಲ್ಲಿ ವನ್ಯಜೀವಿ ಸದಸ್ಯ ಸಂಕೇತ್‌ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಎರಡು ಸಾಕಾನೆ ಮತ್ತು 60 ಸಿಬ್ಬಂದಿ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Tags: