Mysore
17
overcast clouds

Social Media

ಗುರುವಾರ, 08 ಜನವರಿ 2026
Light
Dark

ಕೊಡಗಿನ ನಂಬರ್‌ ಒನ್‌ ಟ್ಯಾಕ್ಸ್‌ ಪೇಯರ್‌ ರಶ್ಮಿಕಾ ಮಂದಣ್ಣ!

rashmika mandanna controversy on Kodava culture

ಕೊಡಗು : ಕರುನಾಡಿನ ಕೊಡಗಿನ ಸುಂದರಿ ಸಿನಿ ತಾರೆ ರಶ್ಮಿಕಾ ಮಂದಣ್ಣ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿದ್ದಾರೆ. ಹೀಗಾಗಿ ಅವರು ಆಗಾಗ್ಗೆ ಸುದ್ದಿಯಲ್ಲೂ ಇರ್ತಾರೆ. ಅದರಲ್ಲೂ ಟ್ರೋಲ್ ಆದ ವಿಷಯದಲ್ಲೇ ಸುದ್ದಿ ಹಾಗೋದು ತುಸು ಹೆಚ್ಚು. ಆದರೆ ಈ ಭಾರಿ ಕೊಡಗಿನಲ್ಲಿ ವಿಭಿನ್ನ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ.

ಹೌದು… ಆದಾಯ ತೆರಿಗೆ ಪಾವತಿಯಲ್ಲಿ ಕೊಡಗಿಗೆ ನಂಬರ್ 1 ಆಗಿ ಹೊರಹೊಮ್ಮಿದ್ದಾರೆ ರಶ್ಮಿಕಾ. ಕನ್ನಡ ಚಿತ್ರರಂಗದಿಂದ ಗುರುತಿಸಿಕೊಂಡು ನಂತರದಲ್ಲಿ ತೆಲುಗು ಸೇರಿದಂತೆ ಬಾಲಿವುಡ್ನಲ್ಲಿಯೂ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಉದ್ಯಮದ ಹಣಕಾಸಿನ ವಹಿವಾಟನ್ನು ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ ಎಲ್ಎಲ್ಪಿ ಹೆಸರಿನಲ್ಲೇ ಮಾಡುತ್ತಿದ್ದಾರೆ

2022 ರ ಆಗಸ್ಟ್ನಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು ಈಗ 2025-26ನೇ ಆರ್ಥಿಕ ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಅತೀ ಹೆಚ್ಚು ಆದಾಯ ತೆರಿಗೆ ಪಾವತಿದಾರರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಮೂರು ಅವಧಿಯಲ್ಲಿ ತೆರಿಗೆ ಪಾವತಿಯಲ್ಲಿ ಇವರೇ ನಂಬರ್ 1 ಆಗಿದ್ದಾರೆ. ಈ ವರ್ಷದ ಹಣಕಾಸು ವರ್ಷ ಅಂತ್ಯವಾಗುವ ಮಾರ್ಚ್ವರೆಗೂ ಈ ಸ್ಥಾನದಲ್ಲೇ ರಶ್ಮಿಕಾ ಮುಂದುವರೆಯಬಹುದು ಎಂಬ ವಿಶ್ವಾಸವನ್ನು ಆದಾಯ ತೆರಿಗೆ ಇಲಾಖೆ ಹೊಂದಿದೆ.

ಪ್ರಸ್ತುತ ರಶ್ಮಿಕಾ ಅವರು ತೆರಿಗೆ ಪಾವತಿಯಲ್ಲಿ ಕೊಡಗು ಜಿಲ್ಲೆಯಿಂದ ಮೊದಲ ಸ್ಥಾನದಲ್ಲಿರುವ ವಿಚಾರದ ಬಗ್ಗೆ ಆದಾಯ ತೆರಿಗೆ ಇಲಾಖೆ ಅವರ ಪೋಷಕರಲ್ಲಿ ತಿಳಿಸಿದ್ದು ಹರ್ಷ ವ್ಯಕ್ತಪಡಿಸಿದೆ. ತೆರಿಗೆ ಪಾವತಿಯಲ್ಲಿ ಜಿಲ್ಲೆಯಿಂದ ಮೊದಲ ಸ್ಥಾನದಲ್ಲಿರುವ ರಶ್ಮಿಕಾ ವಿಕಸಿತ ಭಾರತದ ಬ್ರ್ಯಾಂಡ್ ಅಬಾಸಿಡರ್ ಆಗಿಯೂ ಗುರುತಿಸಲ್ಪಟ್ಟಿದ್ದಾರೆ.

Tags:
error: Content is protected !!