Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ನಾಪೋಕ್ಲು| ತಗ್ಗಿದ ಮಳೆ: ಪ್ರವಾಹ ಇಳಿಮುಖ

ಮಡಿಕೇರಿ: ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಭಾನುವಾರ(ಜು.21) ಮಳೆಯ ಬಿರುಸು ತಗ್ಗಿದ್ದು,
ಕಾವೇರಿ ನದಿ ಪ್ರವಾಹ ಇಳಿಮುಖವಾಗಿದೆ. ಇದರಿಂದ ಜಲಾವೃತಗೊಂಡಿದ್ದ ರಸ್ತೆಗಳು ಸಂಚಾರ ಮುಕ್ತವಾಗಿವೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಮೈದುಂಬಿ ಹರಿದು ಮೂರು ದಿನಗಳಿಂದ ರಸ್ತೆಗಳು ಜಲಾವೃತ ಗೊಂಡು ಸಂಚಾರ ಸ್ಥಗಿತವಾಗಿ ಜನರು ಆತಂಕ ಎದುರಿಸಿದ್ದರು. ಇದೀಗ ಮಳೆ ಇಳಿಮುಖಗೊಂಡಿದ್ದು ಪ್ರವಾಹ ತಗ್ಗಿದೆ.

ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹ ಇಳಿಕೆಯಾಗಿ ವಾಹನ ಸಂಚಾರ ಆರಂಭವಾಗಿದೆ. ನಾಪೋಕ್ಲು ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲೂ ಪ್ರವಾಹ ಇಳಿಕೆ ಕಂಡಿದ್ದು ಇಂದು ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

ಜತೆಗೆ ನಾಪೋಕ್ಲು ಕೊಟ್ಟಮುಡಿ, ಬೆಟ್ಟಗೇರಿ, ಕೈಕಾಡು ಪಾರಾಣೆ, ಕಕ್ಕಬ್ಬೆ ರಸ್ತೆಯಲ್ಲೂ ಪ್ರವಾಹ ಇಳಿಮುಖವಾಗಿದ್ದು, ಈ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

 

 

 

Tags: