Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಹತ್ತಿದ ಸಂಸದ ಯದುವೀರ್‌ ಒಡೆಯರ್‌

ಪಿರಿಯಾಪಟ್ಟಣ: ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಇಂದು ಪಿರಿಯಾಪಟ್ಟಣದ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನೇರಿ ದೇವರ ದರ್ಶನ ಪಡೆದರು.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಐತಿಹಾಸಿಕ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ವಾರ್ಷಿಕ ದೀವಟಿಗೆ ಉತ್ಸವ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ಭಕ್ತರೊಂದಿಗೆ ಬೆಟ್ಟವನ್ನೇರಿ ದೇವರ ದರ್ಶನ ಪಡೆದರು.

ಸುಮಾರು 3600 ಮೆಟ್ಟಿಲುಗಳನ್ನು ಹೊಂದಿರುವ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನೇರಿದ ಯದುವೀರ್‌ ಅವರು, ಮಲ್ಲಿಕಾರ್ಜುನಸ್ವಾಮಿಯ ದರ್ಶನ ಪಡೆದು ನಾಡಿಗೆ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

Tags:
error: Content is protected !!