Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದಿನದಿಂದ ದಿನಕ್ಕೆ ಅದ್ಭುತವಾಗ್ತಿದೆ ಮಡಿಕೇರಿಯ ರಾಜಾಸೀಟ್‌

ಮಡಿಕೇರಿ: ಕೊಡಗಿನಲ್ಲಿ ಮಳೆ ತಗ್ಗಿದ ಪರಿಣಾಮ ನಿಸರ್ಗದ ಚೆಲುವಿನ ಲಾಸ್ಯ ಎಲ್ಲರ ಕಣ್ಮನ ತಣಿಸುತ್ತಿದೆ. ಹೀಗಾಗಿ ಕೊಡಗಿನತ್ತ ಪ್ರವಾಸಿಗರ ದಂಡೇ ಆಗಮಿಸುತ್ತಿದೆ.

ಕೊಡಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಒಂದಷ್ಟು ಸಮಯವನ್ನು ಪ್ರಶಾಂತ ವಾತಾವರಣ ನಿಸರ್ಗದ ಮಡಿಲಲ್ಲಿ ಕಳೆದು ಹೋಗುವುದೇ ಎಲ್ಲಿಲ್ಲದ ಸಡಗರವಾಗಿದೆ. ಅದರಲ್ಲೂ ಮಡಿಕೇರಿ ನಗರಕ್ಕೆ ಭೇಟಿ ನೀಡಿದವರು ರಾಜಾಸೀಟ್‌ಗೆ ತೆರಳಿ ಅಲ್ಲಿ ಕಾಲ ಕಳೆಯುವುದು ಖುಚಿ ಕೊಡುತ್ತಿದೆ.

ಕೊಡಗಿನ ಪ್ರವಾಸಿ ತಾಣಗಳ ಪೈಕಿ ನಿಸರ್ಗದ ಸುಂದರತೆಯಿಂದಲೇ ಹೆಸರು ವಾಸಿಯಾಗಿರುವುದು ಮಡಿಕೇರಿಯ ರಾಜಾಸೀಟ್.‌ ಇದು ಪ್ರವಾಸಿಗರ ಪ್ರಮುಖ ಸಂದರ್ಶನಕ್ಕೆ ಯೋಗ್ಯ ತಾಣವಾಗಿದೆ. ಇಲ್ಲಿ ಮಟ ಮಟ ಮಧ್ಯಾಹ್ನದ ವೇಳೆಯೂ ತಂಗಾಳಿ ಬೀಸಿದ ಅನುಭವವಾಗುತ್ತದೆ.

ಇಲ್ಲಿಂದ ನಿಂತು ನೋಡುವ ಕಣ್ಣುಗಳಿಗೆ ಹತ್ತಾರು ಸುಂದರ ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುತ್ತಲೇ ಇರುತ್ತದೆ. ಇಲ್ಲಿ ಉಸಿರಾಡಲು ಒಳ್ಳೆಯ ಗಾಳಿ, ಸದ್ದು ಗದ್ದಲವಿಲ್ಲದ ಪ್ರಶಾಂತತೆ, ಕಣ್ಣನ್ನು ತಂಪಾಗಿಸುವ ಹಸಿರು ನೆಮ್ಮದಿ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜಾಸೀಟ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ಪ್ರವಾಸೋದ್ಯಮ ಈಗ ಬಹಳ ಚೇತರಿಕೆ ಕಾಣುತ್ತಿದೆ.

Tags: