ಮಡಿಕೇರಿ: ಇಲ್ಲಿನ ಎಮ್ಮೆಮಾಡು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಎಂ ಮೊಹಮ್ಮದ್ ಗ್ರಾಮದಲ್ಲಿ ಗಾಂಜಾ ಬೆಳೆಸಿದ್ದ ಆರೋಪಿ. ಈತನಿಂದ 35 ಕೆಜಿ 650 ಗ್ರಾಂ ಹಸಿ ಗಾಂಜಾ, 42 ಗಾಂಜಾ ಗಿಡಗಳು, 13 ಕಾಂಡಗಳು ಮತ್ತು 275 ಗ್ರಾಂ ಒಣಗಿದ ಗಾಂಜಾ ನಿಷೇಧಿತ ಮಾದಕ ವಸ್ತುವನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.