ಮಡಿಕೇರಿ: ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲಿದ್ದಾಗಲೇ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಿಂಕೋನ ಪ್ರದೇಶದಲ್ಲಿ ನಡೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ ಎಂಬಾತನೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಬಳಿಕ ಪತ್ನಿ ಜ್ಯೋತಿ ತವರಿಗೆ ತೆರಳಿದ್ದಳು. ಜೈಲಿನಿಂದ ವಾಪಸ್ ಆದ ಕೀರ್ತನ್ ಪತ್ನಿಯನ್ನು ಕರೆತರಲು ಹೋಗಿದ್ದನು. ಆದರೆ ಪತ್ನಿ ಜ್ಯೋತಿ ಆತನ ಜೊತೆ ವಾಪಸ್ ಬರಲು ಒಪ್ಪಲಿಲ್ಲ.
ಇದರಿಂದ ಮನನೊಂದ ಕೀರ್ತನ್ ಪತ್ನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



