Mysore
19
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮಡಿಕೇರಿ | ಗಾಂಜಾ ಮಾರಾಟ ; ಇಬ್ಬರ ಬಂಧನ

ಮಡಿಕೇರಿ : ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ / ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.

ಕುಂಜಿಲ ಗ್ರಾಮದ ಕೆ.ಯು. ಮೊಹಮ್ಮದ್ ಅಶ್ರಫ್ (37) ಮತ್ತು ಅಯ್ಯಂಗೇರಿ ಗ್ರಾಮದ ಪಿ.ಕೆ. ಆಸ್ಕರ್ (24) ಎಂಬುವವರೇ ಪೊಲೀಸರು ಬೀಸಿದ ಬಲೆಗೆ ಬಿದ್ದಿರುವ ಆರೋಪಿಗಳಾಗಿದ್ದಾರೆ. ಇವರಿಂದ 1 ಕೆ.ಜಿ. 151 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಮಾರ್ಚ್‌ 18ರಂದು ಅಯ್ಯಂಗೇರಿ – ನಾಪೋಕ್ಲು ರಸ್ತೆಯಲ್ಲಿ ಗಾಂಜಾ ಮಾರಾಟ / ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ ನಡೆದಿದೆ. ಮಡಿಕೇರಿ ಡಿಎಸ್ಪಿ ಪಿ.ಎ. ಸೂರಜ್, ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ2ರಾದ (ಪ್ರಭಾರ) ಪಿ. ಅನೂಪ್ ಮಾದಪ್ಪ, ಭಾಗಮಂಡಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶೋಭಾ ಲಮಾಣಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಎಸ್ಪಿ ಶ್ಲಾಘನೆ:
ಈ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಪಕ ಕೆ.ರಾಮರಾಜನ್ ಆವರು ಶ್ಲಾಘಿಸಿದ್ದಾರೆ.

Tags:
error: Content is protected !!