ಮಡಿಕೇರಿ : ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಕಲ್ಲೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ನಿವಾಸಿ ರವೀಂದ್ರ ಶೆಟ್ಟಿ (54)ಹಲ್ಲೆಗೊಳಗಾದವರು.
ಕಲ್ಲೂರು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ವಾರ್ಷಿಕ ಪೂಜೋತ್ಸವವು ಸೋಮವಾರ ಬೆಳಿಗ್ಗೆಯಿಂದ ನಡೆದಿದೆ.
ರಾತ್ರಿ ನಡೆದ ಮಂಗಳಾರತಿ ಸಮಯದಲ್ಲಿ ಸ್ಥಳೀಯ ನಿವಾಸಿ ಮೋಹನ ಎಂಬುವವನು ಕ್ಷುಲ್ಲಕ ಕಾರಣಕ್ಕೆ ರವೀಂದ್ರಶೆಟ್ಟಿಯೊಂದಿಗೆ ಜಗಳ ಮಾಡಿದ್ದಾನೆ ಎನ್ನಲಾಗಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿ ಮೋಹನ ಎಂಬಾತ ರವೀಂದ್ರ ಶೆಟ್ಟಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ರವೀಂದ್ರ ಶೆಟ್ಟಿ ಅವರಿಗೆ ತಲೆ ಭಾಗಕ್ಕೆ ತೀವ್ರ ಸ್ಚರೂಪದ ಪೆಟ್ಟಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ಸುಂಟಿಕೊಪ್ಪ ಪಿಎಸ್ ಐ ಜಗದೀಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಘಟನೆ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.