Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಡಿಕೇರಿ: ಮತ್ತೆ ಚೇತರಿಕೆಯತ್ತ ಕೆಎಸ್‌ಆರ್‌ಟಿಸಿ ಆದಾಯ..!

ಮಡಿಕೇರಿ: ಮಳೆ ಸೇರಿದಂತೆ ಹಲವು ಕಾರಣಗಳಿಂದ ಕುಸಿತಕಂಡಿದ್ದ ಕೆಎಸ್‌ಆರ್‌ಟಿಸಿ ಆದಾಯ ಮತ್ತೆ ಚೇತರಿಕೆ ಕಾಣುತ್ತಿದ್ದು, ದಸರಾ ವೇಳೆಯಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳಗೊಂಡು ಲಾಭದ ನಿರೀಕ್ಷೆ ಹೊಂದಲಾಗಿದೆ.

ಕಳೆದ ವರ್ಷ ಜೂ. ೧೧ರಿಂದ ಆರಂಭಗೊಂಡ ಕೆಎಸ್‌ಆರ್‌ಟಿಸಿ ಶಕ್ತಿ ಯೋಜನೆಯಡಿ ಪ್ರಯಾಣಿ ಸುತ್ತಿರುವ ಮಹಿಳೆಯರ ಸಂಖ್ಯೆ ಕಳೆದೆರಡು ತಿಂಗಳುಗಳಿಂದ ಇಳಿಮುಖವಾಗಿತ್ತು. ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿ ಹೆಚ್ಚು ಮಹಿಳೆ ಯರು ಶಕ್ತಿ ಯೋಜನೆಯ ಲಾಭ ಪಡೆದರೆ, ಜೂನ್‌ನಲ್ಲಿ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿತ್ತು. ಸದ್ಯ ಮತ್ತೆ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಾಣುತ್ತಿದ್ದು, ಮುಂದಿನ ಹಬ್ಬದ ಋತುವಿನಲ್ಲಿ ಈ ಸಂಖ್ಯೆಮತ್ತೆ ಹೆಚ್ಚಳ ವಾಗಿ ಯಥಾ ಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂಬುದು ಕೆಎಸ್‌ಆರ್‌ಟಿಸಿ ನಿರೀಕ್ಷೆ. ಕೊಡಗಿನ ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ಬಸ್ಸುಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಇದರಿಂದ ಏಪ್ರಿಲ್ ತಿಂಗಳಲ್ಲಿ ೨ ಕೋಟಿ ರೂ. ಆದಾಯ ಗಳಿಸಿದರೆ, ಮೇ ತಿಂಗಳಲ್ಲಿ ಬರೋಬ್ಬರಿ ೨. ೨೧ ಕೋಟಿ ರೂ. ಆದಾಯ ಬಂದಿದೆ. ಜೂನ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಶಕ್ತಿ ಯೋಜನೆಯ ಆದಾಯ ೧.೮ ಕೋಟಿ ರೂ. ಗೆ ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ ಅತಿ ಕಡಿಮೆ ಎಂಬಂತೆ ೧. ೬೭ ಕೋಟಿ ರೂ. ಆಗಸ್ಟ್ ತಿಂಗಳಲ್ಲಿ ಈ ಸಂಖ್ಯೆ ೧. ೭೮ ಕೋಟಿ ರೂ. ನಷ್ಟಿತ್ತು. ಸೆ. ೧೬ರ ವರೆಗೆ ಒಟ್ಟು ೨,೫೭,೧೭೦ ಮಂದಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ೧ ಕೋಟಿ ರೂ. ವಹಿವಾಟು ನಡೆದಿದೆ. ಪ್ರಯಾಣಿಕರ ಕುಸಿತಕ್ಕೆ ಹಲವು ಕಾರಣ ಗಳಿದ್ದು, ಮಳೆ ಪ್ರಮುಖ ಕಾರಣವಾದರೆ, ಆಷಾಢ, ಶ್ರಾವಣ ಮುಂತಾದ ಆಚರಣೆಗಳ ಹಿನ್ನೆಲೆಯಲ್ಲಿಯೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಪುತ್ತೂರು ವಿಭಾಗ ಮಟ್ಟದಲ್ಲಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ದೇವಾಲಯ ಗಳಿಗೆ ರಾಜ್ಯದೆಲ್ಲೆಡೆಯಿಂದ ಬಸ್ ಸಂಪರ್ಕ ವಿದ್ದು, ಶಕ್ತಿ ಯೋಜನೆಯಡಿ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸುವ ಸ್ಥಳಗಳ ಪೈಕಿ ಇವು ಪ್ರಮುಖವಾಗಿವೆ. ಈ ಎರಡೂ ದೇವಾ ಲಯಗಳಿಗೆ ಶಕ್ತಿ ಯೋಜನೆಯಡಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆಯೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದಿತ್ತು ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಅಽಕಾರಿಗಳು ಮಾಹಿತಿ ನೀಡಿದ್ದಾರೆ. ಧರ್ಮಸ್ಥಳಕ್ಕೆ ಬರುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಈಗ ಮತ್ತೆ ಚೇತರಿಕೆ ಕಾಣುತ್ತಿದ್ದು, ಕಳೆದೊಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಬಸ್‌ಗಳ ಸಂಖ್ಯೆ ಹೆಚ್ಚಳ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಡಿಕೇರಿ ಘಟಕಕ್ಕೆ ೧೦ ಹೊಸ ಬಸ್‌ಗಳನ್ನು ನೀಡಲಾಗಿದ್ದು, ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಳಿಸ ಲಾಗಿದ್ದ ಮಾರ್ಗಗಳನ್ನು ಪುನರಾರಂಭಿಸಲಾಗಿದೆ. ಈ ಅವಽಯಲ್ಲಿ ಒಟ್ಟು ೧೮ ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ. ಮಳೆ ಮತ್ತಿತರ ಕಾರಣಗಳಿಂದಾಗಿ ಜೂನ್ ತಿಂಗಳ ಬಳಿಕ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

ಮಡಿಕೇರಿ ಘಟಕ ಮಾತ್ರವಲ್ಲದೇ ಇತರ ಕಡೆಯೂ ಈ ವ್ಯತ್ಯಾಸ ಕಳೆದ ೩ ತಿಂಗಳಲ್ಲಿ ಕಂಡುಬಂದಿದೆ. ಕಳೆದೊಂದು ವಾರದಿಂದ ಚೇತರಿಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ದಸರಾ ಮಹೋತ್ಸವ ಮತ್ತಿತರ ಕಾರಣಗಳಿಂದ ಪ್ರಯಾಣಿಕರು ಹೆಚ್ಚಾಗುವ ಸಾಧ್ಯತೆಯಿದೆ. -ಎಂ. ಎಂ. ಮೆಹಬೂನ್ ಅಲಿ, ಘಟಕ ವ್ಯವಸ್ಥಾಪಕರು

Tags: